alex Certify ಲಾಕ್ ಡೌನ್ ಮುಗಿಯೋದನ್ನೇ ಕಾಯ್ತಾ ಇದ್ದಾರೆ ರಕ್ಷಿತ್ ಶೆಟ್ಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಮುಗಿಯೋದನ್ನೇ ಕಾಯ್ತಾ ಇದ್ದಾರೆ ರಕ್ಷಿತ್ ಶೆಟ್ಟಿ…!

ಕೊರೊನಾದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಬಹುತೇಕ ವಿನಾಯಿತಿ ನೀಡಲಾಗಿದ್ದರೂ ವಿಮಾನ ಹಾರಾಟ ಆರಂಭವಾಗಿಲ್ಲ. ಜೊತೆಗೆ ಒಂದಿಷ್ಟು ಕೆಲಸಗಳಿಗೆ ಇನ್ನು ವಿನಾಯ್ತು ಸಿಕ್ಕಿಲ್ಲ. ಅದರಲ್ಲಿ ಔಟ್ ಡೋರ್ ಶೂಟಿಂಗ್ ಕೂಡ ಒಂದು. ಅನೇಕ ಸಿನಿಮಾಗಳ ಶೂಟಿಂಗ್ ಔಟ್ ಡೋರ್ ನಲ್ಲಿ ನಡೆಯಬೇಕಿದೆ. ಇನ್ನೊಂದಿಷ್ಟು ಸಿನಿಮಾಗಳ ಶೂಟಿಂಗ್ ಬೇರೆ ದೇಶಗಳಲ್ಲಿ ನಡೆಯಬೇಕಿದೆ. ಹೀಗಾಗಿ ತೊಂದರೆಯಾಗುತ್ತಿದೆ.

ಇದೀಗ ರಕ್ಷಿತ್ ಶೆಟ್ಟಿ ಸಿನಿಮಾಗೂ ಇದೇ ಸಮಸ್ಯೆ ಕಾಡುತ್ತಿದೆ. ರಕ್ಷಿತ್ ಶೆಟ್ಟಿಯ 777 ಚಾರ್ಲಿ ಸಿನಿಮಾ 60 ರಷ್ಟು ಮುಗಿದಿದೆ. ಉಳಿದ ಭಾಗದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಲೇಬೇಕಂತೆ. ಹಿಮ ಬೀಳುವ ಸ್ಥಳದಲ್ಲಿ ಸಿನಿಮಾ ಶೂಟಿಂಗ್ ಇರುವುದರಿಂದ ಕೊಡೈಕೆನಾಲ್​, ಶಿಮ್ಲಾ, ಕಾಶ್ಮೀರ ಸೇರಿದಂತೆ ಇನ್ನೂ ಕೆಲವೆಡೆಗಳಲ್ಲಿ ಶೂಟಿಂಗ್​ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ.

ಹಿಮ ಬೀಳುವಾಗ ಶೂಟಿಂಗ್ ನಡೆಯಬೇಕಿತ್ತು. ಆದರೆ ಲಾಕ್​ಡೌನ್​ನಿಂದಾಗಿ ನಡೆಯಲಿಲ್ಲ. ಈಗ ಮತ್ತೆ ಅಲ್ಲಿಗೆ ಹೋಗಿ ಚಿತ್ರೀಕರಣ ಮಾಡಬೇಕೆಂದರೆ ನವೆಂಬರ್​ವರೆಗೂ ಕಾಯಬೇಕು. ಹೀಗಾಗಿ ಲಾಕ್ ಡೌನ್ ಮುಗಿದ ಕೂಡಲೇ ವಿದೇಶಕ್ಕೆ ಹಾರುವ ಪ್ಲಾನ್ ಹಾಕಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ ಅಂಡ್ ಟೀಮ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...