alex Certify ಬೆಳ್ಳಂಬೆಳಿಗ್ಗೆ ಮನೆಮುಂದೆ ಕಂಡ ದೃಶ್ಯದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ‘ಅಚ್ಚರಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳಂಬೆಳಿಗ್ಗೆ ಮನೆಮುಂದೆ ಕಂಡ ದೃಶ್ಯದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ‘ಅಚ್ಚರಿ’

ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ರಾಜ್‌ ಕುಮಾರ್‌ ಅಭಿಮಾನಿಗಳನ್ನು ದೇವರೆಂದೇ ಪರಿಗಣಿಸುತ್ತಿದ್ದರು. ಈಗಿನ ನಟ – ನಟಿಯರು ಕೂಡಾ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕದಲ್ಲಿರುತ್ತಾರೆ.

ಈಗ ಕೊರೊನಾ ಕಾರಣಕ್ಕೆ ಚಿತ್ರರಂಗದ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಹೀಗಾಗಿ ಬಹುತೇಕ ನಟ – ನಟಿಯರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗೆ ಮನೆಯಲ್ಲಿದ್ದ ನಟಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರಿಗೆ ಅಚ್ಚರಿಯೊಂದು ಕಾದಿತ್ತು.

ಮನೆ ಮುಂದೆ ಮೂವರು ಅಭಿಮಾನಿಗಳು ರಚಿತಾ ರಾಮ್‌ ಅವರ ದರ್ಶನಕ್ಕೆ ಕಾದು ನಿಂತಿದ್ದು, ಇದನ್ನು ರಚಿತಾ ರಾಮ್‌ ಅವರ ತಾಯಿ ತಿಳಿಸಿದ್ದಾರೆ. ರಚಿತಾ ರಾಮ್‌ ಹೊರ ಬಂದ ಕೂಡಲೇ ಎಕ್ಸೈಟ್‌ ಆದ ಅಭಿಮಾನಿಗಳು ತಮ್ಮ ಆಟೋ ಮೇಲೆ ನಿಮ್ಮ ಫೋಟೋ ಇರಬೇಕು ಎಂದು ಹೇಳಿದ್ದಲ್ಲದೇ ಅವರಿಂದಲೇ  ಗಿಫ್ಟ್ ವ್ರಾಪರ್ ಓಪನ್‌ ಮಾಡಿಸಿ ಆ ಫೋಟೋವನ್ನು ತಮ್ಮ ಆಟೋ ಮೇಲೆ ಅಂಟಿಸಿಕೊಂಡಿದ್ದಾರೆ. ಜೊತೆಗೆ ರಚಿತಾ ರಾಮ್‌ ಅವರಿಂದ ಆಟೋಗ್ರಾಫ್‌ ಪಡೆದುಕೊಂಡು ಅಲ್ಲಿಂದ ತೆರಳಿದ್ದು, ಈ ಎಲ್ಲಾ ವಿಚಾರವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ರಚಿತಾ ರಾಮ್‌ ಹಂಚಿಕೊಂಡಿದ್ದಾರೆ.

View this post on Instagram

"ಅಭಿಮಾನಿಗಳೇ ದೇವ್ರು" ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತ ಪಡಿಸ್ತಾರೆ ತುಂಬಾ ಸಂತೋಷ ಆಗುತ್ತೆ. ಆದ್ರೇ ಇವತ್ ಬೆಳಿಗ್ಗೆ ಅಮ್ಮ ಬಂದು "ರಚ್ಚು ಬೆಳಿಗ್ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದ್ರು", ನಾನು ಹೊರಗಡೆ ಬಂದು ನೋಡ್ದೇ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ರು ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೂ ಬಿಡ್ದೇ "ಮೇಡಂ ನಾವ್ ನಿಮ್ ದೊಡ್ ಅಭಿಮಾನಿ ಮೇಡಂ ನನ್ ಆಟೋ ಮೇಲ್ 1st ಫೋಟೋ ನಿಮ್ದೇ ಇರ್ಬೇಕು ಮೇಡಂ" ಎಂದು ಗಿಫ್ಟ್ ವ್ರಾಪರ್ ಒಪೆನ್ ಮಾಡ್ಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು; ನಿಜಕ್ಕೂ ಭಾವುಕನಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕನಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ; ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ❤️? ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡ್ಕೋತೀನಿ❤️? ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ? ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ instagram account ನಲ್ಲಿ ಹಾಕಿ ನನ್ನನ್ನ tag ಮಾಡಿ. ನಾನು repost ಮಾಡುತ್ತೆನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ. ನಿಮ್ಮ, ರಚಿತಾ ರಾಮ್

A post shared by Rachita Ram (@rachita_instaofficial) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...