alex Certify ನಿದ್ರೆಯಿಲ್ಲದ ರಾತ್ರಿ ಕಳೆದ ರಾಗಿಣಿ – ಸಂಜನಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ರೆಯಿಲ್ಲದ ರಾತ್ರಿ ಕಳೆದ ರಾಗಿಣಿ – ಸಂಜನಾ….!

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ವಿಶೇಷ ನ್ಯಾಯಾಲಯದ ಮುಂದೆ ಬರಲಿದೆ. ಹೀಗಾಗಿ ರಾಗಿಣಿ ಹಾಗೂ ಸಂಜನಾ ಕಳೆದ ರಾತ್ರಿ ನಿದ್ರೆಯಿಲ್ಲದೆ ಆತಂಕದಲ್ಲಿ ಕಾಲ ಕಳೆದಿದ್ದಾರೆನ್ನಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿಮಣಿಯರ ಜಾಮೀನು ಅರ್ಜಿ ವಿಚಾರಣೆ ಇಂದು ಎನ್.ಡಿ.ಪಿ.ಎಸ್. ವಿಶೇಷ ನ್ಯಾಯಾಲಯದಲ್ಲಿ ಬರಲಿದ್ದು, ನಟಿಯರಿಗೆ ಜಾಮೀನು ಸಿಗಲಿದೆಯೇ? ಇಲ್ಲ ಜೈಲು ವಾಸವೇ ಗತಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಿಸಿಬಿ ಪರ ಅಭಿಯೋಜಕರು ರಾಗಿಣಿ ಹಾಗೂ ಸಂಜನಾ ಅವರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿ, ಜಾಮೀನು ನೀಡದಂತೆ ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...