alex Certify ನಟ ಫರಾಜ್ ಖಾನ್ ಸಹಾಯಕ್ಕೆ ಧಾವಿಸಿದ ಸಲ್ಮಾನ್ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಫರಾಜ್ ಖಾನ್ ಸಹಾಯಕ್ಕೆ ಧಾವಿಸಿದ ಸಲ್ಮಾನ್ ಖಾನ್

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಫರಾಜ್ ಖಾನ್ ಸಹಾಯಕ್ಕೆ ನಟ ಸಲ್ಮಾನ್ ಖಾನ್ ಧಾವಿಸಿದ್ದು, ಫರಾಜ್ ಅವರ ಚಿಕಿತ್ಸಾ ವೆಚ್ಚ ಭರಿಸಿದ್ದಾರೆ.

ಫರಾಜ್ ಖಾನ್ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೀವನ್ಮರಣದ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿರುವ ಫರಾಜ್ ಖಾನ್ ಆರ್ಥಿಕ ಸಂಕಷ್ಟದಲ್ಲಿದ್ದು, ಚಿಕಿತ್ಸಾ ವೆಚ್ಚ ಭರಿಸಲು ಸಹಾಯ ಮಾಡುವಂತೆ ಅವರ ಕುಟುಂಬ ಮನವಿ ಮಾಡಿತ್ತು.

ಅಲ್ಲದೇ ನಟಿ ಪೂಜಾ ಭಟ್ ಕೂಡ ಫರಾಜ್ ಖಾನ್ ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಫರಾಜ್ ಖಾನ್ ಅವರ ಚಿಕಿತ್ಸಾ ವೆಚ್ಚ ಭರಿಸಿದ್ದಾರೆ. ಈ ಬಗ್ಗೆ ನಟಿ ಕಶ್ಮೇರಾ ಶಾ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಫರಾಜ್ ಅವರ ಚಿಕಿತ್ಸಾ ವೆಚ್ಚ ಭರಿಸುತ್ತಿರುವ ಸಲ್ಮಾನ್ ಖಾನ್ ಗೆ ಧನ್ಯವಾದಗಳು. ಇದು ನಿಜವಾದ ಹ್ಯೂಮನ್ ಬಿಯಿಂಗ್ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...