alex Certify ಕೊರೊನಾ ರೋಗಿಗಳಿಗಾಗಿ ಶಾರೂಕ್ ನೀಡಿದ ಕಟ್ಟಡ ಬಳಕೆಯಾಗಿಯೇ ಇಲ್ಲ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ರೋಗಿಗಳಿಗಾಗಿ ಶಾರೂಕ್ ನೀಡಿದ ಕಟ್ಟಡ ಬಳಕೆಯಾಗಿಯೇ ಇಲ್ಲ….!

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಎಂಬ ಮುಂದಾಲೋಚನೆಯಿಂದ ಒಂದಿಷ್ಟು ಆಸ್ಪತ್ರೆಗಳ ಜೊತೆಗೆ ಸರ್ಕಾರದ ಕಟ್ಟಡಗಳು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ‌. ಅದರಂತೆ ಕೊರೊನಾ ಸೋಂಕಿತರು ಹೆಚ್ಚಾದರೆ ನಮ್ಮ ಬಿಲ್ಡಿಂಗ್ ಬಳಸಿ ಎಂದು ಖ್ಯಾತ ಬಾಲಿವುಡ್‌ ನಟ ಶಾರೂಕ್ ಸರ್ಕಾರಕ್ಕೆ ತಿಳಿಸಿದ್ದರು.

ಅದರಂತೆ ಮುಂಬೈನ ಸಿಡಿ ಮಾರ್ಗ್‌ನಲ್ಲಿರುವ ಶಾರೂಕ್ ಒಡೆತನದ ನಾಲ್ಕು ಮಹಡಿಗಳ ಕಟ್ಟಡವನ್ನು ಕೋವಿಡ್‌ಗಾಗಿ ಮೀಸಲಿಡಲಾಗಿತ್ತು. ಆದರೆ ಇದೀಗ ಈ ಕಟ್ಟಡ ಬಳಕೆಯಾಗುತ್ತಿಲ್ಲ. ಏಕೆಂದರೆ ವೈದ್ಯರ ಕೊರತೆಯಿಂದಾಗಿ ಆ ಕಟ್ಟಡ ಬಳಕೆಯೇ ಆಗಿಲ್ಲವಂತೆ. ಇದೀಗ ಈ ಕಟ್ಟಡ ಹಾಗೆಯೇ ಉಳಿದಿದೆ.

ಶಾರೂಖ್ ಅವರ ಕಟ್ಟಡದಲ್ಲಿ ಅವರದೇ ಆದ ಮೀರ್ ಫೌಂಡೇಷನ್ ಎನ್‌ಜಿಒ 22 ಬೆಡ್‌ಗಳ ವ್ಯವಸ್ಥೆ ಮಾಡಿತ್ತು. ಅಲ್ಲದೆ ಆಸ್ಪತ್ರೆಗೆ ಬೇಕಾದ ರೀತಿಯಲ್ಲಿ ಸುಸಜ್ಜಿತ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಆದರೆ ಪಾಲಿಕೆಯ ಬೇಜವಾಬ್ದಾರಿಯಿಂದ ಇದು ಬಳಕೆಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...