alex Certify ಕೊರೊನಾದಿಂದಾಗಿ ಬೀದಿಗೆ ಬಿದ್ದ ನೇಕಾರರ ಬದುಕು, ಸಹಾಯ ಕೋರಿದ ನಟಿಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದಾಗಿ ಬೀದಿಗೆ ಬಿದ್ದ ನೇಕಾರರ ಬದುಕು, ಸಹಾಯ ಕೋರಿದ ನಟಿಯರು..!

ಕೊರೊನಾ ಕರಿಛಾಯೆ ಎಲ್ಲಾ ಉದ್ಯಮಗಳ ಮೇಲೂ ಬಿದ್ದಿದೆ. ಒಂದಿಷ್ಟು ಉದ್ಯಮಗಳು ಚೇತರಿಕೆ ಕಾಣುತ್ತಿದ್ದರೆ, ಮತ್ತೊಂದಿಷ್ಟು ಉದ್ಯಮಗಳು ನೆಲಕಚ್ಚಿ ಹೋಗಿವೆ. ಆರ್ಥಿಕ ನಷ್ಟದಿಂದ ಮೇಲೇಳಲಾಗುತ್ತಿಲ್ಲ. ಅದರಲ್ಲೂ ಸಣ್ಣ ಉದ್ಯಮಗಳಿಗೆ ಹೆಚ್ಚಿನ ಹೊಡೆದ ಬಿದ್ದಿದೆ. ಇದರಲ್ಲಿ ನೇಕಾರ ಉದ್ಯಮ ಕೂಡ ಒಂದು. ಕೊರೊನಾದಿಂದಾಗಿ ನೇಕಾರರ ಬದುಕು ಬೀದಿಗೆ ಬಿದ್ದಿದ್ದು, ಇವರಿಗೆ ಸಹಾಯ ಮಾಡುವಂತೆ ನಟಿಯರು ಮನವಿ ಮಾಡಿದ್ದಾರೆ.

ಹೌದು, ನಟಿ ಪ್ರಿಯಾಂಕ ಉಪೇಂದ್ರ ನೇಕಾರರ ನೆರವಿಗೆ ಬರುವಂತೆ ಕೋರಿದ್ದಾರೆ. ಈ ಬಗ್ಗೆ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ ಉಪೇಂದ್ರ, ಕೊರೊನಾದಿಂದಾಗಿ ನೇಕಾರರು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ನನಗೆ ನೇಕಾರ ಸಮುದಾಯದ ಬಗ್ಗೆ ಕಾಳಜಿ ಇದೆ. ನಿಮ್ಮ ಸಹಕಾರ ಈ ಸಮುದಾಯದವರಿಗೆ ಬೇಕಾಗಿದೆ. ಹೀಗಾಗಿ ನೇಕಾರರು ನೇಯ್ದ ಬಟ್ಟೆಗಳನ್ನು ಕೊಳ್ಳುವ ಮೂಲಕ ಅವರಿಗೆ ನೆರವಾಗಿ. ಇದರಿಂದ ಅವರ ಜೀವನಕ್ಕೆ ಒಳಿತಾಗುತ್ತದೆ ಎಂದಿದ್ದಾರೆ. ಹಾಗೆಯೇ ಅನೇಕ ನಟ ನಟಿಯರಿಗೂ ಇದನ್ನು ಟ್ಯಾಕ್ ಮಾಡುವ ಮೂಲಕ ಅವರಿಗೂ ವಿನಂತಿ ಮಾಡಿದ್ದಾರೆ.

ಇನ್ನು ಮತ್ತೊಬ್ಬ ನಟಿ ಆಶಿಕಾ ರಂಗನಾಥ್ ಸಹ ನೇಕಾರರ ಬದುಕಿಗೆ ನೆರವಾಗಿ ಎಂದು ಹೇಳಿದ್ದಾರೆ. ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅನೇಕರಿಗೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾದಿಂದಾಗಿ ನೇಕಾರರಿಗೆ ತುಂಬಾ ತೊಂದರೆಯಾಗಿದೆ. ಅವರು ತಯಾರಿಸಿರುವ ಕೈಮಗ್ಗದ ವಸ್ತುಗಳು ಮಾರಾಟವಾಗುತ್ತಿಲ್ಲ. ದೇಸಿ ಬ್ಯಾಗ್‌ಗಳನ್ನು ಕೊಳ್ಳುವ ಮೂಲಕ ಅವರ ಜೀವನಕ್ಕೆ ದಾರಿ ಮಾಡಿ ಕೊಡಿ ಎಂದು ಕೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...