alex Certify ಐಪಿಎಲ್ ಕುರಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದ ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಕುರಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದ ಹಳೆ ವಿಡಿಯೋ ಮತ್ತೆ ವೈರಲ್

ಶನಿವಾರದಿಂದ ಐಪಿಎಲ್ ಗೆ ಚಾಲನೆ ಸಿಕ್ಕಿದ್ದು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಶುಭಾರಂಭ ಮಾಡಿದೆ. ಈ ಪಂದ್ಯಗಳು ಅರಬ್ ನೆಲದಲ್ಲಿ ನಡೆಯುತ್ತಿರುವ ಕಾರಣ ಭಾರತೀಯ ಅಭಿಮಾನಿಗಳು ಟಿವಿಯಲ್ಲಿ ಪಂದ್ಯವನ್ನು ನೋಡಿ ಎಂಜಾಯ್ ಮಾಡಿದ್ದಾರೆ.

ಐಪಿಎಲ್ ಪಂದ್ಯ ಆರಂಭವಾಗುತ್ತಿದ್ದಂತೆ ಬೆಟ್ಟಿಂಗ್ ದಂಧೆಯೂ ಶುರುವಾಗಿದೆ. ಯಾರು ಗೆಲ್ಲುತ್ತಾರೆ ಎಂಬುದರಿಂದ ಹಿಡಿದು ಪ್ರತಿ ಬಾಲ್, ಓವರ್, ವಿಕೆಟ್ ಗೂ ಸಹ ಬೆಟ್ಟಿಂಗ್ ಮಾಡಲಾಗುತ್ತೆ. ಇದರ ಸುಳಿಗೆ ಸಿಲುಕಿದವರು ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬರುತ್ತಾರೆ.

ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಡಿಯೋ ಒಂದನ್ನು ಮಾಡಿದ್ದು, ಐಪಿಎಲ್ ಪಂದ್ಯ ನೋಡಿ ಆದರೆ ಜೂಜಾಡಬೇಡಿ ಎಂದು ಮನವಿ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ಐಪಿಎಲ್ ಪಂದ್ಯದ ವೇಳೆ ಮಾಡಲಾಗಿದ್ದ ಈ ವಿಡಿಯೋವನ್ನು ಈಗ ಮತ್ತೆ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದವರು ದರ್ಶನ್ ಅವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...