alex Certify ಇಂದು ನಟ ದಿ. ಚಿರಂಜೀವಿ ಸರ್ಜಾ ಜನ್ಮದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ನಟ ದಿ. ಚಿರಂಜೀವಿ ಸರ್ಜಾ ಜನ್ಮದಿನ

ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನಟ, ದಿ.ಚಿರಂಜೀವಿ ಸರ್ಜಾ ಅವರ 39ನೇ ವರ್ಷದ ಹುಟ್ಟುಹಬ್ಬ. ಚಿರು ನಿಧನದ ನಂತರ ಇಂದು ಅವರ ಮೊದಲ ಜನ್ಮದಿನವಾಗಿದೆ.

ಚಿರಂಜೀವಿ ಸರ್ಜಾ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನೆಲಗುಳಿಗ್ರಾಮದ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಕುಟುಂಬಸ್ಥರು ಚಿರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಚಿರು ಸಮಾಧಿ ಬಳಿ ಪೂಜೆ, ಅನ್ನದಾನ ಕಾರ್ಯಕ್ರಮಗಳನ್ನು ಕೂಡ ಏರ್ಪಡಿಸಿದ್ದಾರೆ.

ಚಿರು ಇಲ್ಲದ ನೋವಿನಲ್ಲಿಯೂ ಅವರ ಕುಟುಂಬ ಖುಷಿಯನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದು, ಚಿರು ಪತ್ನಿ, ತುಂಬು ಗರ್ಭಿಣಿ ಮೇಘನಾ ಸಾಮಾಜಿಕ ಜಾಲತಾಣಗಳಲ್ಲಿ ’ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ ಎಂದು ಬರೆದುಕೊಂಡಿದ್ದಾರೆ. ಇನ್ನು ಜೂ.ಚಿರುವಿಗೆ ಸ್ವಾಗತ ಕೋರಿ ಕುಟುಂಬಸ್ಥರು ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...