alex Certify ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುವ ಪಾನೀಯಗಳ ಗುಟ್ಟು ಬಿಚ್ಚಿಟ್ಟ ನಟಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುವ ಪಾನೀಯಗಳ ಗುಟ್ಟು ಬಿಚ್ಚಿಟ್ಟ ನಟಿಯರು

ಬಾಲಿವುಡ್ ನಟಿಯರು ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಸ್ತುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವು ಯಾವುದು ಎಂದು ನೋಡೋಣ ಬನ್ನಿ.

46ನೆಯ ವಯಸ್ಸಿನಲ್ಲೂ ದೇಹದ ಫಿಟ್ನೆಸ್ ಕಾಪಾಡಿಕೊಂಡಿರುವ ಮಲೈಕಾ ಅರೋರಾ ನೆಲ್ಲಿಕಾಯಿ, ಅರಿಶಿನ, ಕಾಳುಮೆಣಸಿನ ಪುಡಿ, ಶುಂಠಿ ಮತ್ತು ಆಪಲ್ ಸೈಡ್ ವಿನೆಗರ್ ಅನ್ನು ಬ್ಲೆಂಡ್ ಮಾಡಿ ಸೇವಿಸುತ್ತಾರಂತೆ. ಇದರ ಸೇವನೆಯಿಂದಲೇ ನಾನು ಸ್ಟ್ರಾಂಗ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡಾ ತಮ್ಮ ಫಿಟ್ನೆಸ್ ಸೂತ್ರವನ್ನು ಬಿಚ್ಚಿಟ್ಟಿದ್ದಾರೆ. ಬೆಳಿಗ್ಗೆ ಹಾಲಿಗೆ ಅರಿಶಿನ ಹಾಕಿ ಕುಡಿಯುವುದು ಅವರ ಅಭ್ಯಾಸವಂತೆ. ಬಳಿಕವೂ ಅರಿಶಿನ, ಶುಂಠಿ ಹಾಗೂ ಕಾಳುಮೆಣಸಿನ ಟೀ ಸೇವಿಸುತ್ತಾರಂತೆ. ಸಾಕಷ್ಟು ನೀರು ಕುಡಿಯುವ ವೇಳೆ, ನೀರಿಗೆ ನಿಂಬೆರಸ ಹಾಕಿ ಕುಡಿಯುತ್ತೇವೆ ಎಂದಿದ್ದಾರೆ.

ನಟಿ ಬಿಪಾಶಾ ಪ್ರತಿದಿನ ಚಿಟಿಕೆ ಅರಿಶಿನ, ಜೀರಿಗೆ, ದನಿಯಾ, ಶುಂಠಿ, ಕರಿಮೆಣಸು ಹಾಗೂ ಏಲಕ್ಕಿ ಹಾಕಿದ ಬಿಸಿನೀರನ್ನು ಕುಡಿಯುತ್ತಾರಂತೆ.

ಸೊನಾಲಿ ಬೇಂದ್ರೆ ಪಾಲಕ್, ವಾಲ್ ನಟ್, ನೆಲ್ಲಿಕಾಯಿ, ಕ್ಯಾರೆಟ್, ಎಪ್ರಿಕಾಟ್, ಬಾದಾಮಿ, ಚಕ್ಕೆ ಹಾಗೂ ಸೇಬಿನಿಂದ ತಯಾರಿಸಿದ ಸ್ಮೂಥಿ ಕುಡಿಯುತ್ತಾರಂತೆ. ಇದರೊಂದಿಗೆ ಸಾಕಷ್ಟು ಬಿಸಿ ನೀರು ಕುಡಿಯಲು ಮರೆಯುವುದಿಲ್ಲ ಎನ್ನುತ್ತಾರವರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...