alex Certify ʼಬಿಗ್ ಬಾಸ್ʼ ಮನೆಗೆ ಎಂಟ್ರಿ ಕೊಡಲು ಸಿದ್ಧರಾದ MLC ಹೆಚ್. ವಿಶ್ವನಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್ ಬಾಸ್ʼ ಮನೆಗೆ ಎಂಟ್ರಿ ಕೊಡಲು ಸಿದ್ಧರಾದ MLC ಹೆಚ್. ವಿಶ್ವನಾಥ್

ನಾನೂ ಬಿಗ್ ಬಾಸ್ ಸೀಜನ್-8 ರಲ್ಲಿ ಸ್ಪರ್ಧಿಸುತ್ತಿದ್ದು, ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ನಾನು ಬಿಗ್ ಬಾಸ್ ಮನೆಗೆ ಎಂಟ್ರಿಕೊಡುತ್ತಿದ್ದು, ವಿಶೇಷ ಆಹ್ವಾನಿತನಾಗಿ ಹೋಗುತ್ತಿದ್ದೇನೆ. ಸ್ನೇಹಿತರು ಕೂಡ ಹೋಗುವಂತೆ ಹೇಳುತ್ತಿದ್ದಾರೆ. ನಾಲ್ಕೈದು ದಿನ ಬಿಗ್ ಬಾಸ್ ಮನೆಯಲ್ಲಿ ಇರುತ್ತೇನೆ ಎಂದು ಹೇಳಿದರು.

ಬಿಗ್ ಬಾಸ್ ಸೀಜನ್-6ಕ್ಕೆ ಆಹ್ವಾನ ಬಂದಿತ್ತು. ಆದರೆ ಆ ವೇಳೆ ಅನಾರೋಗ್ಯವಿದ್ದ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ. ಈ ಬಾರಿ ಹೋಗಲು ನಿರ್ಧರಿಸಿದ್ದೇನೆ ಎಂದರು.

ಕನ್ನಡ ಬಿಗ್ ಬಾಸ್ ಸೀಜನ್-8 ನಿನ್ನೆಯಿಂದ ಆರಂಭವಾಗಿದ್ದು, ಹಿರಿಯ ನಟ ಶಂಕರ್ ಅಶ್ವತ್ಥ್, ನಟಿ ಶುಭಾ ಪೂಂಜಾ, ಕಿರುತೆರೆ ನಟಿಯರಾದ ವೈಷ್ಣವಿ, ಗೀತಾ ಭಾರತಿ ಭಟ್ ಸೇರಿದಂತೆ ಈ ಬಾರಿ 17 ಸ್ಪರ್ಧಿಗಳು ಭಾಗವಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...