alex Certify ʼಚಿರು ಇಚ್ಛಿಸಿದಾಗ ನನ್ನ ಮಗುವಿನ ರೂಪದಲ್ಲಿ ವಾಪಸ್ ಬರುತ್ತಾರೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಿರು ಇಚ್ಛಿಸಿದಾಗ ನನ್ನ ಮಗುವಿನ ರೂಪದಲ್ಲಿ ವಾಪಸ್ ಬರುತ್ತಾರೆʼ

ಬೆಂಗಳೂರು: ಚಿರು ಯಾವಾಗ ಮತ್ತೆ ಭೂಮಿಗೆ ವಾಪಸ್ ಬರಬೇಕು ಎಂದು ಇಚ್ಛಿಸುತ್ತಾರೋ ಅಂದು ನನ್ನ ಮಗುವಿನ ರೂಪದಲ್ಲಿ ಬರುತ್ತಾರೆ. ಅದನ್ನು ಅವರೇ ಇಚ್ಛಿಸಬೇಕು ನಾನು ಆ ಬಗ್ಗೆ ಏನೂ ಹೇಳಲು ಆಗುವುದಿಲ್ಲ ಎಂದು ನಟಿ ಮೇಘನಾ ರಾಜ್ ತಿಳಿಸಿದ್ದಾರೆ.

ಇಂದು ನಟ ದಿ.ಚಿರಂಜೀವಿ ಸರ್ಜಾ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಸಮಾಧಿಗೆ ಪೂಜೆ ಸಲ್ಲಿಸಲು ತೆರಳಿರುವ ಚಿರು ಪತ್ನಿ ಮೇಘನಾ, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚಿರು ಜನ್ಮದಿನದಂದೇ ಮಗುವಾಗಬೇಕು ಎಂಬುದು ಅಭಿಮಾನಿಗಳ ಆಶಯ ಎಂಬ ಬಗ್ಗೆ ಅದನ್ನು ಚಿರು ನಿರ್ಧರಿಸಬೇಕು. ಅವರು ಯಾವಾಗ ನನ್ನ ಮಗುವಾಗಿ ವಾಪಸ್ ಬರಬೇಕು ಎಂದು ಇಚ್ಚಿಸುತ್ತಾರೋ ಅಂದು ಬರಲಿ. ನೋಡೋಣ ಎಂದು ಹೇಳಿದರು.

ಇನ್ನು ಸೀಮಂತ ಕಾರ್ಯಕ್ರಮವನ್ನು ಚಿರು ಕನಸಿನಂತೆ ಧ್ರುವ ಹಾಗೂ ನಮ್ಮ ತಂದೆ-ತಾಯಿ, ಕುಟುಂಬದವರು ನೆರವೇರಿಸಿದ್ದಾರೆ. ನನಗೆ ತುಂಬಾ ಖುಷಿಯಾಗಿದೆ. ಈ ಬಗ್ಗೆ ಚಿರುಗೂ ಸಂತಸವಾಗಿರುತ್ತೆ. ಸೀಮಂತದ ದಿನ ನನಗೆ ತುಂಬಾ ಸ್ಪೆಷಲ್ ಡೇ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...