alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಸರು ಬದಲಾಯಿಸಿಕೊಳ್ಳುತ್ತಾರಂತೆ ರಶ್ಮಿಕಾ ಮಂದಣ್ಣ…!

ಕನ್ನಡ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಂತರ ಬೇರೆ ಬೇರೆ ಭಾಷೆಯಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ಲಾಕ್‌ಡೌನ್ ಡೇಸ್‌ನ ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಮೀಟ್ ಮಾಡುತ್ತಿದ್ದಾರೆ ಈ ನಟಿ.

ಈ ನಟಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳುತ್ತಾರಂತೆ. ಹೀಗಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹೆಸರು ಬದಲಾವಣೆಗೆ ಅಭಿಮಾನಿಗಳು ಸಹಾಯ ಮಾಡಬೇಕಂತೆ. ತಮಾಷೆಯ ಪ್ರಶ್ನೆ- ನಾನು ನನ್ನ ಹೆಸರು ಬದಲಾವಣೆ ಮಾಡಿಕೊಳ್ಳಬೇಕೆಂದರೆ, ನೀವು ನನಗೆ ಯಾವ ಹೆಸರನ್ನು ಸೂಚಿಸುತ್ತೀರಾ ಎಂದು ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದಾರೆ ಈ ನಟಿ.

ಈ ಪೋಸ್ಟ್‌ಗೆ ಸಾಕಷ್ಟು ಕಮೆಂಟ್‌ಗಳು ಬಂದಿವೆ. ಅಷ್ಟೇ ಯಾಕೆ ಒಬ್ಬೊಬ್ಬರು ಒಂದೊಂದು ಹೆಸರು ಸೂಚಿಸಿದ್ದಾರೆ. ಕೆಲವೊಬ್ಬರು ಅವರ ಸಿನಿಮಾ ಪಾತ್ರಗಳ ಹೆಸರು ಸೂಚಿಸಿದರೆ ಮತ್ತೊಂದಿಷ್ಟು ಜನ ವಿಜಯ್ ದೇವರಕೊಂಡ ಹೆಸರು ಸೇರಿಸಿಕೊಳ್ಳಿ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...