alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಯಸ್ಸಲ್ಲೂ ಕುಂದಿಲ್ಲ ಅಮಿತಾಬ್ ಎನರ್ಜಿ..!

ಅಮಿತಾಭ್ ಅಂದ್ರೆ ಯಾರಿಗೆ ಇಷ್ಟ ಇಲ್ಲ. ಅಭಿಮಾನಿಗಳಂತೂ ಅಮಿತಾಭ್ ಬಚ್ಚನ್ ಅಂದರೆ ಸಾಕು ಎಲ್ಲಿಲ್ಲದ ಪ್ರೀತಿ. ಈ ವಯಸ್ಸಿನಲ್ಲೂ ವಾರಕ್ಕೆ ಒಮ್ಮೆ ನೇರವಾಗಿ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ ಈ ನಟ. ಮನೆ ಬಳಿ ಬಂದ ಯಾವ ಅಭಿಮಾನಿಗೂ ಬೇಸರ ಮಾಡಲ್ಲ. ಹಾಗೆಯೇ ನಟನೆಗೆ ಬಂದರೆ ಯಾವುದೇ ಪಾತ್ರಕ್ಕಾದರೂ ಸೈ ಎನಿಸುವ ನಟ. ಇಷ್ಟು ವಯಸ್ಸಾದರೂ ಈ ನಟನ ಎನರ್ಜಿ ಮಾತ್ರ ಕಡಿಮೆಯಾಗಿಲ್ಲ.

ಇವರ ಫೋಟೋ ಒಂದು ಇದೀಗ ಸಕ್ಕತ್ ಸದ್ದು ಮಾಡುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಬಚ್ಚನ್ ಅವರು ವರ್ಕೌಟ್ ಮಾಡಿದ ಫೋಟೋ ಇದೀಗ ವೈರಲ್ ಆಗುತ್ತಿದೆ. ವಿಶೇಷ ಅಂದರೆ ಮೊಮ್ಮಗನ ಜೊತೆ ವರ್ಕೌಟ್ ಮಾಡುತ್ತಿದ್ದು, ತಮ್ಮ 77ನೇ ವಯಸ್ಸಿನಲ್ಲೂ ಫುಲ್ ಆಕ್ಟೀವ್ ಆಗಿದ್ದಾರೆ.

ತಮ್ಮ ಮೊಮ್ಮಗ ಅಗಸ್ತ್ಯ ನಂದ ಜೊತೆ ಕೈಯಲ್ಲಿ ಡಂಬಲ್ ಹಿಡಿದು ಫುಲ್ ಜೋಶ್‌ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಮಿತಾಭ್ ಎನರ್ಜಿಗೆ ಫಿದಾ ಆಗಿದ್ದಾರೆ. ಅಮಿತಾಭ್ ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ‌.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...