ದಾವಣಗೆರೆ: ಮಹಿಳೆಯನ್ನು ಕಚ್ಚಿ ಸಾಯಿಸಿದ್ದ ಎರಡು ರಾಟ್ ವೀಲರ್ ನಾಯಿಗಳೇ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊರವಲದ ಹೊನ್ನೂರು ಅಡಿಕೆ ತೋಟದಲ್ಲಿ ಎರಡು ದಿನಗಳ ಹಿಂದೆ ರಾಟ್ ವೀಲರ್ ನಾಯಿ ಮಾಲೀಕ ನಾಯಿಗಳನ್ನು ತೋಟದಲ್ಲಿ ಬಿಟ್ಟು ಹೋಗಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಟ್ಟಿಸಿಕೊಂಡು ಬಂದ ನಾಯಿಗಳು ಮಹಿಳೆಯನ್ನು ಕಚ್ಚಿ ಸಾಯಿಸಿದ್ದವು. ರಾಟ ವೀಲರ್ ದಾಳಿಗೆ 35 ವರ್ಷದ ಮಹಿಳೆ ಅನಿತಾ ಮೃತಪಟ್ಟಿದ್ದವು. ಘಟನೆ ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರು ಎರಡೂ ನಾಯಿಗಳನ್ನು ಸೆರೆಹಿಡಿದಿದ್ದರು.
ನಾಯಿಗಳನ್ನು ಸೆರೆಹಿಡಿಯುವ ವೇಳೆ ಗಾಯಗೊಂಡು ಎರಡೂ ನಾಯಿಗಳು ಸಾವನ್ನಪ್ಪಿವೆ. ರಾಟ್ ವೀಲರ್ ನಾಯಿಗಳ ಮಾಲೀಕ ಯಾರು ಎಂಬ ಬಗ್ಗೆ ಪತ್ತೆ ಮಾಡುವಂತೆ ಸ್ಥಳೀಯರು, ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ. ನಾಯಿ ದಾಳಿಯಿಂದಾಗಿ ಮಹಿಳೆ ಸಾವನ್ನಪ್ಪಿದ್ದು, ಆಕೆಯ ನಾಲ್ವರು ಮಕ್ಕಳು ಅನಾಥರಾಗಿದ್ದಾರೆ.
