alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಹುಡುಗಿಗೆ ಮನಸ್ಸು ಕೊಟ್ಟ ಇಬ್ಬರು ಶಿಕ್ಷಕರ ಕಥೆ ಹೀಗಾಯ್ತು……

ಪ್ರೀತಿ ಎಷ್ಟು ಹಿತ, ಸಂತೋಷ ನೀಡುತ್ತದೆಯೋ ಅಷ್ಟೇ ಅಪಾಯಕಾರಿ. ಪ್ರೀತಿ ಅಪರಾಧಕ್ಕೆ ತಿರುಗಿದ ಅನೇಕ ಘಟನೆಗಳು ಇತ್ತೀಚಿಗೆ ಬೆಳಕಿಗೆ ಬರ್ತಿವೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪ್ರೀತಿ ಗಲಾಟೆಗೆ ಇಬ್ಬರು ಶಿಕ್ಷಕರು ಪ್ರಾಣ ಬಿಟ್ಟಿದ್ದಾರೆ.

ಉತ್ತರ ಪ್ರದೇಶದ ಮಿರ್ಜಾಪುರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡ್ತಿದ್ದ ಸೂರಜ್ ಶವ ಮಂಗಳವಾರ ಸಿಕ್ಕಿತ್ತು. ವಿಚಾರಣೆ ವೇಳೆ ಸೂರಜ್ ಹತ್ಯೆ ಮಾಡಿದ್ದು ಅನುಜ್ ಹೆಸರಿನ ಶಿಕ್ಷಕ ಎಂಬುದು ಗೊತ್ತಾಗಿದೆ. ಈ ಶಿಕ್ಷಕನಿಗೆ ಸಹಾಯ ಮಾಡಿದ ಇನ್ನೊಬ್ಬ ಶಿಕ್ಷಕನನ್ನು ಬಂಧಿಸಲಾಗಿದೆ.

ಅನುಜ್ ಕಳೆದ ಮೂರು ಮೂರು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಕಳೆದ ಎರಡು ತಿಂಗಳಿಂದ ಸೂರಜ್ ಕೂಡ ಆ ಹುಡುಗಿ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದನಂತೆ. ಇದನ್ನು ತಿಳಿದ ಅನುಜ್, ಸೂರಜ್ ಗೆ ಹುಡುಗಿಯಿಂದ ದೂರವಿರುವಂತೆ ಹೇಳಿದ್ದಾನೆ. ಆದ್ರೆ ಸೂರಜ್ ನಿರಾಕರಿಸಿದ್ದಾನೆ. ಉಳಿದ ಸ್ನೇಹಿತರೂ ಒಪ್ಪಂದಕ್ಕೆ ಪ್ರಯತ್ನಿಸಿದ್ದಾರೆ. ಆದ್ರೆ ಇದು ಸಾಧ್ಯವಾಗದ ಕಾರಣ ಅನುಜ್ ತನ್ನ ಸ್ನೇಹಿತನನ್ನು ಮುಗಿಸಲು ಮುಂದಾಗಿದ್ದಾನೆ. ಇನ್ನೊಬ್ಬನ ಜೊತೆ ಸೇರಿ ಕತ್ತು ಹಿಸುಕಿ ಶವವನ್ನು ಮೋರಿಗೆ ಎಸೆದಿದ್ದಾನೆ. ನಂತ್ರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...