alex Certify
ಕನ್ನಡ ದುನಿಯಾ       Mobile App
       

Kannada Duniya

ದಂಡ ತಪ್ಪಿಸಿಕೊಳ್ಳಲು ಹೋಂ ಗಾರ್ಡ್ ಎಳೆದೊಯ್ದ ಬೈಕ್ ಚಾಲಕರು

ಸಂಚಾರ ನಿಯಮ ಉಲ್ಲಂಘನೆ ದಂಡನೆಯಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರರು, ಹೋಂಗಾರ್ಡ್ ಒಬ್ಬರನ್ನು ಕುತ್ತಿಗೆ ಹಿಡಿದು ಅರ್ಧ ಕಿಲೋಮೀಟರ್ ದರದರನೆ ಎಳೆದೊಯ್ದು ಬಿಟ್ಟ ಅಮಾನವೀಯ ಘಟನೆ ನಡೆದಿದೆ.

ಹರಿಯಾಣದ ಸೋನಿಪೇಟ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬೈಕ್ ಸವಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೈಕ್ ನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದುದನ್ನು ಗಮನಿಸಿದ ಸಂಚಾರಿ ಪೊಲೀಸರು ಅವರನ್ನು ನಿಲ್ಲುವಂತೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಂಡ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಪೊಲೀಸರೊಂದಿಗಿದ್ದ ಹೋಂ ಗಾರ್ಡ್ ಜೈದೀಪ್ ಅವರ ಕುತ್ತಿಗೆ ಪಟ್ಟಿ ಹಿಡಿದ ಬೈಕ್ ಸವಾರರು, ಐನೂರು ಮೀಟರ್ ಬಳಿಕ‌ ಬಿಟ್ಟಿದ್ದಾರೆ.

ರಸ್ತೆ ಮಧ್ಯೆಯೇ ಬಿಟ್ಟಿದ್ದು, ಅಪಘಾತದಿಂದ ಜೈದೀಪ ಕೂದಲೆಳೆ ಅಂತರದಿಂದ ಪಾರಾಗಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...