alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ದಿನದ ಹಸುಗೂಸಿಗೆ ಸಿಕ್ತು ಇಂಥ ಶಿಕ್ಷೆ…!

एक दिन के नवजात मासूम को मिली ऐसी सजा, जानकर हो जाएंगे हैरान

ಮಧ್ಯಪ್ರದೇಶದ ಮಾಂಡ್ಸರ್ ನಲ್ಲಿ ಕರುಣೆಯಿಲ್ಲದ ತಾಯಿಯೊಬ್ಬಳು ನವಜಾತ ಶಿಶುವನ್ನು ನಾಲೆಗೆ ಎಸೆದು ಹೋಗಿದ್ದಾಳೆ. ಶಿಶು ಅಳುವ ಶಬ್ಧ ಕೇಳಿ ಅನೇಕರು ಅಲ್ಲಿಗೆ ಬಂದಿದ್ದಾರೆ. ಆದ್ರೆ ಯಾರೊಬ್ಬರೂ ಮಗುವನ್ನು ಎತ್ತುವ ಪ್ರಯತ್ನಕ್ಕೆ ಹೋಗಿರಲಿಲ್ಲ. 75 ವರ್ಷದ ಹಬ್ಬನ್ ಅಪಾ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಬ್ಬನ್ ಅಪಾಗೆ 6 ಮಕ್ಕಳಿದ್ದು, ಈ ಮಗುವನ್ನು ತಾವೇ ಸಾಕುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಗುವನ್ನು ಆಸ್ಪತ್ರೆಗೆ ತಂದಾಗ ಅದ್ರ ಸ್ಥಿತಿ ಗಂಭೀರವಾಗಿತ್ತಂತೆ. ತಕ್ಷಣ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಈಗ ಮಗು ಚೇತರಿಸಿಕೊಳ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಕೇಂದ್ರ ದತ್ತು ಸಂಸ್ಥೆ ವಶದಲ್ಲಿ ಮಗುವಿದೆ.

ಮಗುವನ್ನು ದತ್ತು ನೀಡುವ ಪೋರ್ಟಲ್ ಕೇಂದ್ರ ದತ್ತು ಸಂಸ್ಥೆಯಾಗಿದ್ದು, ಮಕ್ಕಳ ಬಗ್ಗೆ ಇದ್ರಲ್ಲಿ ಮಾಹಿತಿ ನೀಡಲಾಗುತ್ತದೆ. ದತ್ತು ಪಡೆಯಲು ಇಚ್ಛಿಸುವವರು ಮಗುವನ್ನು ಈ ಪೋರ್ಟಲ್ ಮೂಲಕ ಸಂಪರ್ಕಿಸಬೇಕಾಗುತ್ತದೆ. ಈಗಾಗಲೇ ಮಗುವಿನ ತಾಯಿ ಹುಡುಕಾಟ ಶುರುವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...