alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿ ಪಕ್ಕದ ಮನೆಗೆ ಮಲಗಲು ಹೋಗಿದ್ಲು ಪತ್ನಿ….ಪತಿ ಮಾಡ್ದ ಇಂಥ ಕೆಲಸ..!

ಪತ್ನಿ ಮಾರುಕಟ್ಟೆಯಿಂದ ತಡವಾಗಿ ಬಂದಿದ್ದಕ್ಕೆ ಕುಡಿದು ಬಂದ ಪತಿ ಗಲಾಟೆ ಮಾಡಿದ್ದಾನೆ. ಇದ್ರಿಂದ ಬೇಸತ್ತ ಪತ್ನಿ ಪಕ್ಕದ ಮನೆಗೆ ಮಲಗಲು ಹೋಗಿದ್ದಾಳೆ. ಮಕ್ಕಳಿಬ್ಬರು ಅಜ್ಜಿ ಮನೆಗೆ ಹೋಗಿದ್ದಾರೆ.

ಬೆಳಿಗ್ಗೆ ದಂಪತಿ ಗಲಾಟೆ ಸರಿಪಡಿಸಲು ಮುಂದಾದ ಪಕ್ಕದ ಮನೆಯವರು ಮನೆ ಗೇಟ್ ತೆಗೆಯಲು ಯತ್ನಿಸಿದ್ದಾರೆ. ಆದ್ರೆ ಒಳಗಿನಿಂದ ಯಾವುದೇ ಶಬ್ಧ ಬರಲಿಲ್ಲ. ಕಿಟಕಿಯಲ್ಲಿ ನೋಡಿದ ನೆರೆಯವರು ದಂಗಾಗಿದ್ದಾರೆ.

ಪತಿ ತೇಜು ನಾಗೆಶಿಯಾ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ನೆರೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತ್ರ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ವಶಕ್ಕೆ ಪಡೆದಿದ್ದಾರೆ. ಪತ್ನಿ ಮಾರುಕಟ್ಟೆಯಿಂದ ಬರಲು ತಡವಾಗಿತ್ತಂತೆ. ಹವಾಮಾನದಲ್ಲಿ ವ್ಯತ್ಯಯವಾದ ಕಾರಣ ಆಕೆ ಮಾರುಕಟ್ಟೆಯಲ್ಲೇ ಸ್ವಲ್ಪ ಸಮಯ ಕಳೆದಿದ್ದಳು ಎನ್ನಲಾಗಿದೆ.

ತಡವಾಗಿ ಬಂದಿದ್ದಕ್ಕೆ ಪತಿ ಕಾರಣ ಕೇಳಿದ್ದಾನೆ. ಪತ್ನಿ ಉತ್ತರಿಸಿದ್ರೆ ಆಕೆ ಮೇಲೆ ಅನುಮಾನಗೊಂಡಿದ್ದಾನೆ. ಇದ್ರಿಂದ ಬೇಸತ್ತ ಪತ್ನಿ ರಾತ್ರಿ ಪಕ್ಕದ ಮನೆಗೆ ಹೋಗಿದ್ದಳು ಎನ್ನಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...