ಕೋಲಾರ: ಏಳು ದಿನಗಳ ನವಜಾತ ಶಿಶುವನ್ನು ಬಿಟ್ಟು ದಂಪತಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿಯಲ್ಲಿ ನಡೆದಿದೆ.
ಶ್ರೀನಿವಾಸರೆಡ್ಡಿ ಎಂಬುವವರ ಕೋಳಿ ಫಾರಂ ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಸ್ಸಾಂ ಮೂಲದ ರೆಹಮಾನ್ (28) ಹಾಗೂ ಫರಿಜಾ (22) ಆತ್ಮಹತ್ಯೆಗೆ ಶರಣಾದವರು.
15 ದಿನಗಳ ಹಿಂದೆ ಕೋಳಿ ಫಾರಂನಲ್ಲಿ ಕೆಲಸಕ್ಕೆಂದು ಬಂದಿದ್ದರು. ಏಳು ದಿನಗಳ ಹಿಂದೆ ರೆಹಮಾನ್-ಫರಿಜಾ ದಂಪತಿಗೆ ಹೆಣ್ಣುಮಗುವಾಗಿತ್ತು. ಈಗ ಮಗುವನ್ನು ಬಿಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
