ಕೋಲಾರ: ತಮ್ಮದೇ ಪಕ್ಷದ ರೆಬಲ್ ನಾಯಕರು ದೆಹಲಿ ಪ್ರವಾಸ ಕೈಗೊಂಡಿದ್ದು, ಈ ಬಗ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ನರಿ ಕೂಗು ಗಿರಿ ಮುಟ್ಟಲ್ಲ ಎಂಬ ಮಾತಿದೆ. ಹಾಗೇ ರೆಬಲ್ ನಾಯಕರು ದೆಹಲಿಗೆ ಹೋಗಿ ಏನು ಮಾಡುತ್ತಾರೆ? ಏನೋ ಕೆಲಸಕ್ಕೆ ಹೋಗಿರಬೇಕಷ್ಟೇ ಹೋಗಲಿ ಬಿಡಿ. ನಾವು ಹೋಗ್ಬೇಡ ಅಂತ ಹೇಳೋಕೆ ಆಗುತ್ತಾ? ಹೈಕಮಾಂಡ್ ಮನಸ್ಸು ಮಾಡಿದರೆ ಯಾರು ಬೇಕಾದರು ಕೆಳಗೆ ಇಳಿಬಹುದು ಎಂದಿದ್ದಾರೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅವರು ಏನು ಮಾಡ್ತಾರೆ? ಅವರು ಹತ್ತೋಕೆ ಆಗುತ್ತಾ? ಆಗಲ್ಲ. ಯಾರಿಗೆ ಹೆಚ್ಚು ಜನ ಬೆಂಬಲವಿದೆಯೋ ಅವರಿಗೆ ಹೈಕಮಾಂಡ್ ನಾಯಕರು ಅಧಿಅಕರ ಕೊಡ್ತಾರೆ. ವಿಜಯೇಂದ್ರ ಅಧ್ಯಕ್ಷರಾಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದರು.
