ಕೇಬಲ್ ಆಪರೇಟರ್ ಗಳಿಗೆ ಗುಡ್ ನ್ಯೂಸ್: ಪ್ರತಿ ಕಂಬಕ್ಕೆ ವಿಧಿಸುವ ಶುಲ್ಕ 150 ರಿಂದ 75 ರೂ.ಗೆ ಇಳಿಕೆ: ಸಚಿವ ಜಾರ್ಜ್

ಬೆಳಗಾವಿ(ಸುವರ್ಣಸೌಧ): ರಾಜ್ಯದ ಕೇಬಲ್ ಆಪರೇಟರ್ ಗಳಿಗೆ ಪ್ರತಿ ಕಂಬಕ್ಕೆ ವಿಧಿಸುವ ಶುಲ್ಕವನ್ನು 150 ರೂ ನಿಂದ 75 ರೂ.ಗೆ ಇಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಚಾರ್ಜ್ ತಿಳಿಸಿದ್ದಾರೆ.

ಸೋಮವಾರ ಸದನದಲ್ಲಿ ಕಾಂಗ್ರೆಸ್ ಸದಸ್ಯೆ ಬಲ್ಕಿಶ್ ಬಾನು ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಕೇಬಲ್ ಆಪರೇಟರ್ ಗಳು ತಮ್ಮ ಕೆಲಸಕ್ಕೆ ಪರವಾನಿಗೆ ಸೇರಿ ವಿವಿಧ ಶುಲ್ಕ ಪಾವತಿಸಬೇಕಿದೆ. ಇತ್ತೀಚೆಗೆ ಬ್ರಾಡ್ ಬ್ಯಾಂಡ್ ಬಳಿಕ ಕೇಬಲ್ ಬಳಕೆ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶ, ಮಲೆನಾಡು ಭಾಗದಲ್ಲಿ ಸಂಪರ್ಕ ನೀಡಲು ಹೆಚ್ಚಿನ ವಿದ್ಯುತ್ ಕಂಬ ಬಳಸಬೇಕಿದೆ. ಹೀಗಾಗಿ ಕೇಬಲ್ ಆಪರೇಟರ್ ಗಳಿಗೆ ಮೊದಲಿನಂತೆ ಆದಾಯ ಇಲ್ಲವಾಗಿದೆ. ಪ್ರತಿ ಕಂಬಕ್ಕೆ ವಿಧಿಸುತ್ತಿರುವ 150 ರೂಪಾಯಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಬಲ್ಕಿಶ್ ಬಾನು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಾರ್ಜ್, ಪ್ರತಿ ಕಂಬಕ್ಕೆ ವಿಧಿಸುವ ಶುಲ್ಕವನ್ನು 150 ರೂ. ನಿಂದ 75 ರೂ.ಗೆ ಇಳಿಕೆ ಮಾಡುವುದಾಗಿ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read