ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದು, ರಾಘೋಪುರ ಕ್ಷೇತ್ರದಲ್ಲಿ ಆರ್.ಜೆ.ಡಿ. ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಹಿನ್ನಡೆ ಗಳಿಸಿದ್ದಾರೆ.
ಅವರ ಸಹೋದರ, ಜನಶಕ್ತಿ ಜನತಾದಳದ ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಮಹುವಾ ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ತೇಜಸ್ವಿ ಯಾದವ್ 1273 ಮತಗಳ ಅಂತರದಲ್ಲಿ ಹಿನ್ನಡೆಯಲ್ಲಿದ್ದಾರೆ. ರಘೋಪುರ ಕ್ಷೇತ್ರದಲ್ಲಿ ಬಿಜೆಪಿಯ ಸತೀಶ್ ಕುಮಾರ್ ಮುನ್ನಡೆ ಗಳಿಸಿದ್ದಾರೆ. ಮೂರನೇ ಸುತ್ತಿನಲ್ಲಿ ತೇಜಸ್ವಿ ಯಾದವ್ ಗೆ ಹಿನ್ನಡೆಯಾಗಿದೆ.
