ದಾವಣಗೆರೆ: ದಾವಣಗೆರೆ ನಗರದ ಹೊರವಲಯದಲ್ಲಿ ಗುರುವಾರ ರಾತ್ರಿ ಮಲ್ಲಶೆಟ್ಟಿಹಳ್ಳಿಯ ಅನಿತಾ(38) ಅವರ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಎರಡು ರಾಟ್ ವೀಲರ್ ಶ್ವಾನಗಳು ಸಾವಿಗೀಡಾಗಿವೆ.
ಈ ನಾಯಿಗಳ ಮಾಲೀಕನನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ರಾಟ್ ವೀಲರ್ ನಾಯಿಗಳನ್ನು ಹೊನ್ನೂರು ಗೊಲ್ಲರ ಶೆಟ್ಟಿ ಸಮೀಪ ಬಿಟ್ಟು ಹೋದ ಶ್ರಾನದ ಮಾಲೀಕನನ್ನು ಬಂಧಿಸಲಾಗಿದೆ.
ದಾವಣಗೆರೆ ಶಿವಾಲಿ ಚಿತ್ರಮಂದಿರ ಮಾಲೀಕರ ಅಳಿಯ ಶೈಲೇಂದ್ರ ಕುಮಾರ್ ನನ್ನ ಬಂಧಿಸಲಾಗಿದೆ. ಹಲವು ವರ್ಷಗಳಿಂದ ರಾಟ್ ವೀಲರ್ ಶ್ವಾನಗಳನ್ನು ಶೈಲೇಂದ್ರ ಸಾಕಿದ್ದ. ಡಿಸೆಂಬರ್ 5 ರಂದು ಜಮೀನಿನಲ್ಲಿ ರಾಟ್ ವೀಲರ್ ಶ್ವಾನಗಳನ್ನು ಬಿಟ್ಟು ಹೋಗಿದ್ದ. ಈ ವೇಳೆ ಎರಡು ನಾಯಿಗಳು ನಡೆಸಿದ ದಾಳಿಯಿಂದ ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ ಮೃತಪಟ್ಟಿದ್ದರು. ದಾವಣಗೆರೆ ತಾಲೂಕಿನ ಹೊನ್ನೂರು ಕ್ರಾಸ್ ಬಳಿ ಘಟನೆ ನಡೆದಿತ್ತು.
