ಹಾಸನ: ಪ್ರೀತಿ ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿನಿಮೀಯ ರೀತಿಯಲ್ಲಿ ಕಾರ್ ಕೆರೆಗೆ ತಳ್ಳಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಂದನಹಳ್ಳಿ ಗ್ರಾಮದ ಸಮೀಪ ಬೇಲೂರಿನ ಶ್ವೇತಾ(32) ಅವರನ್ನು ಕೊಲೆ ಮಾಡಲಾಗಿದೆ. ಗಂಡನಿಂದ ದೂರವಾಗಿ ತವರು ಮನೆ ಸೇರಿದ್ದ ಶ್ವೇತಾ ಹಾಸನದಲ್ಲಿ ಕೆಲಸ ಮಾಡುವಾಗ ರವಿ ಪರಿಚಯವಾಗಿತ್ತು. ನಾನು ಪತ್ನಿಯನ್ನು ಬಿಟ್ಟು ಬರುತ್ತೇನೆ ನೀನು ಬಾ ಎಂದು ಪೀಡಿಸುತ್ತಿದ್ದ. ತನ್ನ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಶ್ವೇತಾರನ್ನು ರವಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ನಿನ್ನೆ ಹಾಸನದಿಂದ ತನ್ನ ಕಾರ್ ನಲ್ಲಿ ಶ್ವೇತಾ ಅವರನ್ನು ಕರೆತಂದಿದ್ದು, ಚಂದನಹಳ್ಳಿ ಕೆರೆಗೆ ಕಾರ್ ಬೀಳಿಸಿ ಆರೋಪಿ ಕತೆ ಕಟ್ಟಿದ್ದಾನೆ. ಕಾರ ಆಕಸ್ಮಿಕವಾಗಿ ಕೆರೆಗೆ ಬಿದ್ದಿದೆ. ನನ್ನ ಗೆಳತಿ ಕಾರ್ ನಲ್ಲಿದ್ದಾಳೆ. ತಾನು ಈಜಿ ದಡ ಸೇರಿದ್ದೇನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ. ಆರೋಪಿ ರವಿಯನ್ನು ಅರೇಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.