BREAKING: ಮೊದಲ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಕಟಕ್: ಕಟಕನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 101 ರನ್ ಅಂತರದಿಂದ ಭರ್ಜರಿ ಜಯ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಭಾರತದ ಪರ ಅಭಿಷೇಕ್ ಶರ್ಮಾ 17, ಶುಭಮನ್ ಗಿಲ್ 4, ಸೂರ್ಯಕುಮಾರ್ ಯಾದವ್ 12, ತಿಲಕ್ ವರ್ಮಾ 26, ಅಕ್ಷರ ಪಟೇಲ್ 23, ಹಾರ್ದಿಕ್ ಪಾಂಡ್ಯ ಅಜೇಯ 59, ಶಿವನದುಬೆ 11, ಜಿತೇಶ್ ಶರ್ಮಾ 10 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರವಾಗಿ ಲುಂಗಿ ಎಂಗಿಡಿ 3, ಲೂತೋ ಸಿಂಪಾಮ್ಲಾ 2, ಡೆನ್ವೋವ್ಯಾನ್ ಫೆರಾರಿಯಾ 1 ವಿಕೆಟ್ ಪಡೆದರು.

176 ರನ್ ಗೆಲುವಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 12.3 ಓವರ್ ಗಳಲ್ಲಿ 74 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲು ಕಂಡಿದೆ.

ಕ್ವಿಂಟನ್ ಡಿ ಕಾಕ್ 0, ಏಡನ್ ಮಕ್ರಂ 14, ಕ್ರಿಸ್ಟನ್ ಸ್ಟಬ್ಸ್ 14, ಡಿವಾಲ್ಡ್ ಬ್ರೆವಿಸ್ 22, ಡೇವಿಡ್ ಮಿಲ್ಲರ್ 1, ಡೆನ್ವೋವ್ಯಾನ್ ಫೆರಾರಿಯಾ 5, ಮಾರ್ಕೊ ಜೇನ್ಸನ್ 12, ಕೇಶವ ಮಹಾರಾಜ 0, ಅನ್ರಿಚ್ ನೋಟ್ರೇಜ್ 1, ಲುಥೋ ಸಿಂಪಮ್ಲ 2, ಲುಂಗಿ ಎಂಗಿಡಿ 1 ರನ್ ಗಳಿಸಿದ್ದಾರೆ.

ಭಾರತದ ಪರ ಆರ್ಶ್ ದೀಪ್ ಸಿಂಗ್ 2, ಜಸ್ ಪ್ರೀತ್ ಬುಮ್ರಾ 2, ವರುಣ್ ಚಕ್ರವರ್ತಿ 2, ಅಕ್ಷರ್ ಪಟೇಲ್ 2, ಹಾರ್ದಿಕ್ ಪಾಂಡ್ಯ 1, ಶಿವಂದುಬೆ 1 ವಿಕೆಟ್ ಪಡೆದರು.

ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಗಳ ಶತಕ

ಪಂದ್ಯದ ವೇಳೆ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20ಐ ಕ್ರಿಕೆಟ್‌ನಲ್ಲಿ ಪ್ರಮುಖ ದಾಖಲೆಯನ್ನು ನಿರ್ಮಿಸಿದರು.

ಹಾರ್ದಿಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು, ಹಾರ್ದಿಕ್ ಟಿ20ಐ ಸ್ವರೂಪದಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿದರು, ಈ ಮೈಲಿಗಲ್ಲು ತಲುಪಿದ ನಾಲ್ಕನೇ ಭಾರತೀಯರಾದರು. ಸ್ಟಾರ್ ಆಲ್‌ರೌಂಡರ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಅವರಂತಹ ಎಲೈಟ್ ಪಟ್ಟಿಯಲ್ಲಿ ಸೇರಿದರು.

ಟಿ20ಐಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರರು:

1 – ರೋಹಿತ್ ಶರ್ಮಾ: 151 ಇನ್ನಿಂಗ್ಸ್‌ಗಳಲ್ಲಿ 205 ಸಿಕ್ಸರ್‌ಗಳು

2 – ಸೂರ್ಯಕುಮಾರ್ ಯಾದವ್: 90 ಇನ್ನಿಂಗ್ಸ್‌ಗಳಲ್ಲಿ 155 ಸಿಕ್ಸರ್‌ಗಳು

3 – ವಿರಾಟ್ ಕೊಹ್ಲಿ: 117 ಇನ್ನಿಂಗ್ಸ್‌ಗಳಲ್ಲಿ 124 ಸಿಕ್ಸರ್‌ಗಳು

4 – ಹಾರ್ದಿಕ್ ಪಾಂಡ್ಯ: 95 ಇನ್ನಿಂಗ್ಸ್‌ಗಳಲ್ಲಿ 100 ಸಿಕ್ಸರ್‌ಗಳು

5 – ಕೆಎಲ್ ರಾಹುಲ್: 68 ಇನ್ನಿಂಗ್ಸ್‌ಗಳಲ್ಲಿ 99 ಸಿಕ್ಸರ್‌ಗಳು

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read