BREAKING : ನಟ ಉಪೇಂದ್ರ ದಂಪತಿಗಳ ‘ಮೊಬೈಲ್ ಹ್ಯಾಕ್’ ಕೇಸ್ : ಆರೋಪಿ ಅರೆಸ್ಟ್.!

ಬೆಂಗಳೂರು : ನಟ ಉಪೇಂದ್ರ ದಂಪತಿಗಳ ಮೊಬೈಲ್ ಹ್ಯಾಕ್ ಮಾಡಿರುವ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಬಂಧಿತನನ್ನ ಬಿಹಾರ ಮೂಲದ ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದೆ. ಸದಾಶಿವನಗರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಫೋನ್ ನಂಬರ್ ಹ್ಯಾಕ್ ಆಗಿತ್ತು.. ಕಿಡಿಗೇಡಿಗಳು ಉಪೇಂದ್ರ ದಂಪತಿಯ ಫೋನ್ ನಂಬರ್ ಹ್ಯಾಕ್ ಮಾಡಿದ್ದು, ಮೆಸೇಜ್ ಗಳ ಮೂಲಕ ಹಣ ಹಾಕುವಂತೆ ಕೇಳಿದ್ದರು. ಈ ಬಗ್ಗೆ ನಟ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ವಿಡಿಯೋ ಮೂಲಕ ಮಾಹಿತಿ ನೀಡಿದ್ದು, ನನ್ನ ಹಾಗೂ ಪತ್ನಿ ಪ್ರಿಯಾಂಕಾ ಅವರ ಫೋನ್ ನಂಬರ್ ಗಳನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಫೋನ್ ಮೂಲಕ ಬರಿ ಸಂದೇಶಗಳನ್ನು ಕಳುಹಿಸುತ್ತಿದ್ದು, ಅರ್ಜಂಟಾಗಿ ಹಣ ನೀಡುವಂತೆ ಮೆಸೇಜ್ ಕಳುಹಿಸುತ್ತಿದ್ದಾರೆ.ನಮ್ಮ ಫೋನ್ ನಂಬರ್ ಗಳಿಂದ ಕರೆ ಅಥವಾ ಮೆಸೇಜ್ ಬಂದರೆ ದಯವಿಟ್ಟು ಯಾರೂ ಹಣ ಹಾಕಬೇಡಿ. ಫೋನ್ ನಂಬರ್ ಹ್ಯಾಕ್ ಆಗಿದೆ ಎಂದು ಮನವಿ ಮಾಡಿದ್ದರು. ಅಲ್ಲದೇ ಫೋನ್ ನಂಬರ್ ಹ್ಯಾಕ್ ಆಗಿರುವ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಬಿಹಾರಿ ಹ್ಯಾಕರ್ ಗಳು ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬಯಲಾಗಿತ್ತು. ಈ ಹಿನ್ನೆಲೆ ಪೊಲಿಸ್ ಅಧಿಕಾರಿಗಳು ವಿಶೇಷ ತಂಡವನ್ನು ಬಿಹಾರಕ್ಕೆ ಕಳುಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read