ಮುಂಬೈ: ಮಕ್ಕಳು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಬಾಲಕನೊಬ್ಬ ನೀರಿನ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್ ದಲ್ಲಿ ನಡೆದಿದೆ.
8 ವರ್ಷದ ಬಾಲಕ ವಸತಿ ಕಟ್ಟಡದ ನೀರಿನ ಟ್ಯಾಂಕ್ ನಲ್ಲಿ ಐದು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಇದು ಆಕಸ್ಮಿಕವಾದ ಸಾವೋ ಅಥವಾ ಕೊಲೆಯೋ ಎಂಬುದನ್ನು ಪೊಲೀಸರು ತನಿಖೆ ನಡೆಸಿದ್ದಾರೆ.
ಬಾಲಕ ತನ್ನ ಪೋಷಕರೊಂದಿಗೆ ನೆಲಸೋಪಾರಾ ಟಕಿಪಾಡಾ ಪ್ರದೇಶದ ಕರಾರಿ ಬಾಗ್ ನಲ್ಲಿ ವಾಸವಾಗಿದ್ದ. ಡ್ಸೆಂಬರ್ ೩ರಂದು ಶಾಲೆಯಿಂದ ಬಂದವನು ಆಟವಾಡಲೆಂದು ಹೊರಗೆ ಹೋಗಿದ್ದ. ಬಳಿಕ ಮನೆಗೆ ವಾಪಾಸ್ ಆಗಿಲ್ಲ. ಡಿ.೪ರಂದು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತೀವ್ರ ಹುಡುಕಾಟ ನಡೆಸಿದಾಗ ಪೊಲೀಸರಿಗೆ ಬಾಲಕನ ಶವ ನೀರಿನ ಟ್ಯಾಂಕ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೆಹ್ರಾಜ್ ಮೃತ ಬಾಲಕ. ಟ್ಯಾಂಕ್ ಓಪನ್ ಆಗಿ ಇತ್ತು. ಅದರಲ್ಲಿ ಬಾಲಕನ ಶವ ಪತ್ತೆಯಾಗಿದೆ. ಆಟವಾಡುವಾಗ ಅಡಗಿಕೊಳ್ಳಲು ಬಂದಾಗ ಕಾಲು ಜಾರಿ ಬಾಲಕ ಬಿದ್ದಿರಬಹುದು ಎಂದು ಶಂಕುಸಲಾಗಿದೆ.
