ಪಾಟ್ನಾ: ದಾಖಲೆಯ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ನಿತೀಶ್ ಕುಮಾರ್ ಅವರ ಹೆಸರು ಲಂಡನ್ ವಿಶ್ವ ದಾಖಲೆಗಳ ಪುಸ್ತಕ ಸೇರ್ಪಡೆಯಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯ ನಂತರ 1947 ರಿಂದ 2025 ರವರೆಗೆ 10 ಬಾರಿ ಪ್ರಮಾಣವಚನ ಸ್ವೀಕರಿಸಿದ ಏಕೈಕ ವ್ಯಕ್ತಿ ಬಿಹಾರ್ ಸಿಎಂ ನಿತೀಶ್ ಕುಮಾರ್. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಮೈಲುಗಲ್ಲಾಗಿದೆ. ನಿತೀಶ್ ಕುಮಾರ್ ಅವರ ಬದ್ಧತೆ, ದೂರ ದೃಷ್ಟಿಯ ನಾಯಕತ್ವ, ಬಿಹಾರದ ಜನರ ಆಚಲ ನಂಬಿಕೆಯಾಗಿದೆ.
10 ಬಾರಿ ರಾಜ್ಯವನ್ನು ಮುನ್ನಡೆಸುವುದು ಕೇವಲ ಒಬ್ಬ ವ್ಯಕ್ತಿಯ ವೈಯಕ್ತಿಕ ಸಾಧನೆ ಅಲ್ಲ, ಬದಲಿಗೆ ಇಡೀ ದೇಶಕ್ಕೆ ಗೌರವದ ಕ್ಷಣವಾಗಿದೆ ಎಂದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅಭಿನಂದನಾ ಪತ್ರದಲ್ಲಿ ಪ್ರಶಂಸಿಸಿದೆ.
