ಸರ್ಕಾರದ ಮಾರ್ಗಸೂಚಿಗಳನುಸಾರ ಜಿಲ್ಲೆಯಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವವರು ಕೆಎಯುಪಿ ಮಂಡಳಿ ನೋಂದಣಿ ಪ್ರಮಾಣ ಪತ್ರ ಹೊಂದಿರುವುದು ಮತ್ತು ಕ್ಲಿನಿಕ್‍ಗಳಿಗೆ ಕೆಪಿಎಮ್‍ಇ ನೋಂದಣಿ ಹೊಂದಿರುವುದು ಕಡ್ಡಾಯವಾಗಿದೆ.
ಅನಧಿಕೃತ ವೈದ್ಯ ವೃತ್ತಿ ನಡೆಸುತ್ತಿರುವುದು, ಅನಧಿಕೃತವಾಗಿ ಟೆಂಟ್ ಹಾಕಿಕೊಂಡು ನಕಲಿ ಔಷಧಿಗಳನ್ನು ಸಾರ್ವಜನಿಕರಿಗೆ ನೀಡುತ್ತಿರುವವರು ಕಂಡು ಬಂದಲ್ಲಿ ತಕ್ಷಣವೇ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಎಲ್ಲಾ ಸಾರ್ವಜನಿಕರು ನಕಲಿ ವೈದ್ಯರಿಂದ ದೂರವಿರಲು ಮತ್ತು ಅರ್ಹ ನೋಂದಾಯಿತ ವೈದ್ಯರಿಂದಲೇ ವೈದ್ಯಕೀಯ ಸೇವೆಯನ್ನು ಪಡೆಯಬೇಕೆಂದು ಧಾರವಾಡ ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
