ಬೆಂಗಳೂರು : ರಾಜ್ಯದ ವಾಹನ ಸವಾರರೇ ಗಮನಿಸಿ, ಶೇ.50 ರಷ್ಟು ರಿಯಾಯಿತಿ ದರದಲ್ಲಿ ‘ಟ್ರಾಫಿಕ್’ ದಂಡ ಪಾವತಿಗೆ ಡಿ.12 ಕೊನೆಯ ದಿನವಾಗಿದೆ.
ನ.21 ರಿಂದ ಡಿಸೆಂಬರ್ 12 ರವರೆಗೆ ಶೇ.50 ರಷ್ಟು ರಿಯಾಯಿತಿ ದರದಲ್ಲಿ ‘ಟ್ರಾಫಿಕ್’ ದಂಡ ಪಾವತಿಗೆ ಮತ್ತೆ ಅವಕಾಶ ನೀಡಿ ಸಾರಿಗೆ ಅಧಿಕಾರಿಗಳು ಆದೇಶ ಹೊರಡಿಸಿದ್ದರು.
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ನಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು (ಐವತ್ತರಷ್ಟು ಮಾತ್ರ) ರಿಯಾಯಿತಿ ನೀಡಿ ಆದೇಶಿಸಿದೆ.ಬೆಂಗಳೂರಿನಾದ್ಯಂತ ನಾಗರಿಕರು ಶೇ. 50 ರಷ್ಟು ರಿಯಾಯಿತಿಯೊಂದಿಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು ಜವಾಬ್ದಾರಿಯುತವಾಗಿ ಪಾವತಿಸುತ್ತಿದ್ದಾರೆ. ನೀವು ಬಾಕಿ ದಂಡ ಪಾವತಿಸಿ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
11ನೇ ದಿನ, ಮತ್ತು ನಗರದ ಪ್ರತಿಕ್ರಿಯೆ ಅದ್ಭುತವಾಗಿದೆ!
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) December 1, 2025
ಬೆಂಗಳೂರಿನಾದ್ಯಂತ ನಾಗರಿಕರು ಶೇ. 50 ರಷ್ಟು ರಿಯಾಯಿತಿಯೊಂದಿಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು ಜವಾಬ್ದಾರಿಯುತವಾಗಿ ಪಾವತಿಸುತ್ತಿದ್ದಾರೆ – ಮತ್ತು ಅಂಕಿ-ಅಂಶಗಳೇ ಎಲ್ಲವನ್ನೂ ಹೇಳುತ್ತಿವೆ!#TrafficFineDiscount #ClearYourDues #50PercentChallan #RoadSafety… pic.twitter.com/EJlPJjUmhD
