alex Certify ಹೋಟೆಲ್​​ನ ಈ ದಿಕ್ಕಿನಲ್ಲಿ ಕ್ಯಾಶ್​ ಕೌಂಟರ್​ ಅಳವಡಿಸಿದ್ರೆ ದೊರೆಯುತ್ತೆ ʼಲಕ್ಷ್ಮೀ ಕಟಾಕ್ಷʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್​​ನ ಈ ದಿಕ್ಕಿನಲ್ಲಿ ಕ್ಯಾಶ್​ ಕೌಂಟರ್​ ಅಳವಡಿಸಿದ್ರೆ ದೊರೆಯುತ್ತೆ ʼಲಕ್ಷ್ಮೀ ಕಟಾಕ್ಷʼ

ಹೋಟೆಲ್​ಗಳಲ್ಲಿ ಕ್ಯಾಶಿಯರ್​ ವಿಭಾಗ ಅನ್ನೋದು ಇದ್ದೇ ಇರುತ್ತೆ. ಇದನ್ನ ಹೋಟೆಲ್​​ನ ವಿನ್ಯಾಸಕ್ಕೆ ತಕ್ಕಂತೆ ಜಾಗವನ್ನ ಫಿಕ್ಸ್ ಮಾಡಲಾಗುತ್ತೆ. ಆದರೆ ಕ್ಯಾಶ್​ ಕೌಂಟರ್​ನ್ನ ಸರಿಯಾದ ದಿಕ್ಕಿನಲ್ಲಿ ಇರಿಸಿದ್ರೆ ಮಾತ್ರ ಹೋಟೆಲ್​ನಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎನ್ನುತ್ತೆ ವಾಸ್ತು ಶಾಸ್ತ್ರ.

ಕ್ಯಾಶ್​ ಕೌಂಟರ್​ನಲ್ಲಿ ಕ್ಯಾಶಿಯರ್​ ಆಗಿ ಕುಳಿತ ವ್ಯಕ್ತಿ ಎಂದಿಗೂ ತನ್ನ ಬಲ ಭಾಗದಲ್ಲೇ ಕ್ಯಾಶ್​ ಬಾಕ್ಸ್​ನ್ನ ಇಡಬೇಕು ಹಾಗೂ ಈ ಕ್ಯಾಶ್​ ಬಾಕ್ಸ್​​ನ ಬಾಗಿಲು ಉತ್ತರ ದಿಕ್ಕಿನತ್ತ ತೆರೆಯುವಂತೆ ಇರಬೇಕು. ಈ ರೀತಿಯ ವಾಸ್ತುವಿನಿಂದ ನಿಮ್ಮ ಹೋಟೆಲ್​ನಲ್ಲಿ ಲಾಭವಾಗುತ್ತೆ.

ಹೋಟೆಲ್​ನಲ್ಲಿ ವಿದ್ಯುತ್​ ಸಂಪರ್ಕ ನೀಡುವಾಗಲೂ ವಾಸ್ತು ಶಾಸ್ತ್ರವನ್ನ ಮರೆಯುವಂತಿಲ್ಲ. ಹೋಟೆಲ್​ನ ಎಲೆಕ್ಟ್ರಿಕ್​ ಮೀಟರ್​​ನ್ನ ನೈಋತ್ಯ ದಿಕ್ಕಿನಲ್ಲಿ ಅಳವಡಿಸೋದು ಉತ್ತಮ. ದಕ್ಷಿಣ ಹಾಗೂ ಈಶಾನ್ಯ ಭಾಗದಲ್ಲಿ ಎಲೆಕ್ಟ್ರಿಕ್​ ಮೀಟರ್​ ಅಳವಡಿಸದಿರಿ. ಜನರೇಟರ್​ ಹಾಗೂ ಟ್ರಾನ್ಸ್​ಫಾರ್ಮರ್​​ಗಳಿಗೆ ಅಗ್ನಿ ಮೂಲೆಯನ್ನ ಆಯ್ಕೆ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...