alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ್ಳೆ ದಿನ ನಿಮ್ಮದಾಗಬೇಕಾ…? ಬೆಳಿಗ್ಗೆ ಮರೆತೂ ಮಾಡಬೇಡಿ ಈ ಕೆಲಸ

ಮನುಷ್ಯನ ಯೋಗಕ್ಷೇಮ, ಸುಖ – ಶಾಂತಿಗಾಗಿ ಗ್ರಂಥದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಗ್ರಂಥದ ಪ್ರಕಾರ ಪ್ರತಿ ಬೆಳಿಗ್ಗೆ ಮನುಷ್ಯನಿಗೆ ಹೊಸ ಹುಟ್ಟು ಇದ್ದ ಹಾಗೆ. ಪ್ರತಿ ರಾತ್ರಿ ಮಲಗುವುದೆಂದರೆ ಅದು ಮೃತ್ಯು. ಹಾಗಾಗಿ ಪ್ರತಿ ದಿನವನ್ನು ಸುಖ, ಶಾಂತಿಯಿಂದ ಕಳೆಯಲು ಕೆಲವೊಂದು ನಿಯಮಗಳನ್ನು ಪಾಲಿಸುವುದು ಯೋಗ್ಯ ಎನ್ನುತ್ತದೆ ಗ್ರಂಥ.

ಮರೆತೂ ಬೆಳ್ಳಂಬೆಳಿಗ್ಗೆ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಪ್ರತಿದಿನ ಚಿಂತೆ ಇಲ್ಲದೆ, ಶಾಂತ ಮನಸ್ಸಿನಿಂದ ಏಳಬೇಕು. ಕೆಲಸ ಹಾಗೂ ಬಯಕೆಗಳ ಬಗ್ಗೆ ಯೋಚಿಸುತ್ತ ಏಳಬಾರದು. ಇದು ಇಡೀ ದಿನ ಮನಸ್ಸನ್ನು ಅಶಾಂತಿಗೊಳಿಸುತ್ತದೆ. ಅದರಿಂದ ನಷ್ಟವುಂಟಾಗುವ ಸಾಧ್ಯತೆ ಇರುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬೇಡಿ. ನಿಮ್ಮ ಅಂಗೈ ಅಥವಾ ದೇವರ ಫೋಟೋ ನೋಡಿ. ಮನಸ್ಸಿನಲ್ಲಿ ದೇವರ ಧ್ಯಾನ ಮಾಡಿ.

ಬೆಳಿಗ್ಗೆ ಮನೆ ಮುಂದೆ ಭಿಕ್ಷುಕ ಬಂದರೆ ಆತನಿಗೆ ಏನಾದರೂ ನೀಡಿಯೇ ಕಳುಹಿಸಿ. ಬೆಳಿಗ್ಗೆ ಮನೆಗೆ ಭಿಕ್ಷುಕ ಬಂದ್ರೆ ಅದು ಶುಭ ಶಕುನ ಎಂಬ ನಂಬಿಕೆ ಇದೆ.

ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ವಿಚಾರಕ್ಕೆ ಗಲಾಟೆ ಮಾಡಿಕೊಳ್ಳಬೇಡಿ. ಅದು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇಡೀ ದಿನ ಕಿರಿಕಿರಿ ಅನುಭವಿಸಬೇಕಾಗುತ್ತದೆ.

ಕೆಲಸದ ಮೇಲೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ. ಕೋಪ ಮತ್ತು ಒತ್ತಡಕ್ಕೆ ಒಳಗಾಗಬೇಡಿ. ಹಿರಿಯರಿಗೆ ಅವಮಾನ ಮಾಡಬೇಡಿ. ಇದು ಒಳ್ಳೆಯದಲ್ಲ ಎನ್ನುತ್ತದೆ ಗ್ರಂಥ.

ನಿಮ್ಮ ಸಮಸ್ಯೆಗಳ ಮಾಹಿತಿ ಮತ್ತು ಪರಿಹಾರ ತಿಳಿಯಲು ಸಂಪರ್ಕಿಸಿ:

ಪಂಡಿತ್ ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...