alex Certify ಶನಿದೇವನ ಅನುಗ್ರಹದಿಂದ ದಿನಭವಿಷ್ಯ ಹಾಗೂ ರಾಶಿಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶನಿದೇವನ ಅನುಗ್ರಹದಿಂದ ದಿನಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ

ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ಸರಕಾರದಿಂದ ಪ್ರಶಸ್ತಿ ಮತ್ತು ಸನ್ಮಾನಗಳು ಲಭಿಸಲಿವೆ. ಎಲೆಕ್ಟ್ರಾನಿಕ್, ಕಂಪ್ಯೂಟರ್ ಕ್ಷೇತ್ರದವರಿಗೆ ಹೆಚ್ಚಿನ ಆದ್ಯತೆ. ವಿದ್ಯಾರ್ಥಿ ವೃಂದದವರಿಗೆ ಉನ್ನತ ಶ್ರೇಣಿ ಪ್ರಾಪ್ತವಾಗಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಭಾಗ್ಯವಿದೆ.

ಹೈನುಗಾರಿಕೆ ಹಾಗೂ ತೋಟದ ಬೆಳೆಗಾರಿಕೆ ನಡೆಸುವವರಿಗೆ ಈ ದಿನ ಉತ್ತಮವಾದ ಸಂಪಾದನೆ ಇರುವುದು. ಕಬ್ಬಿಣ ಮುಂತಾದ ಕಟ್ಟಡ ಸಾಮಗ್ರಿಗಳಿಂದ ಲಾಭವಿದೆ. ಈ ವರ್ಷ ದ್ವಿಚಕ್ರ ಮತ್ತು ವಾಹನ ಉಪಕರಣಗಳ ಮಾರಾಟ ಹೆಚ್ಚಲಿದೆ. ವಿವಾಹ ನಡೆಯುವ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಅವಕಾಶ ಇದೆ.

ವೃಷಭ ರಾಶಿ

ನ್ಯಾಯಾಲಯದಲ್ಲಿರುವ ಪ್ರಕರಣಗಳು ನಿಮ್ಮ ಪರವಾಗಿ ಗೆಲುವನ್ನು ತರುತ್ತವೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ನಡೆಸಿದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿವೆ. ಹಾಲು ಉತ್ಪನ್ನ ವಸ್ತುಗಳಿಂದ ಲಾಭ ಗಳಿಸುವಿರಿ.

ಶ್ರೀ ಕ್ಷೇತ್ರಗಳಿಗೆ ಹಿರಿಯರೊಂದಿಗೆ ಯಾತ್ರೆ ಕೈಗೊಳ್ಳುವುದರಿಂದ ಕಾರ್ಯಾನುಕೂಲವಾಗುವುದು. ಶ್ರೀ ಅಷ್ಟಲಕ್ಷ್ಮಿಯನ್ನು ಸ್ಮರಿಸಿ, ಕಾರ್ಯಗಳು ಕೈಗೂಡುವುದು.

ನೂತನ ಕೆಲಸದೊಂದಿಗೆ ಈ ದಿನ ಆರಂಭವಾಗಲಿದೆ. ಪುಣ್ಯಕ್ಷೇತ್ರಗಳಿಗೆ ಹೋಗಿ ಬರುವ ಯೋಗವುಂಟು. ಮಾನಸಿಕ ಸಮಸ್ಯೆ ಇದ್ದು ಚುರುಕುತನ ಕಡಿಮೆ ಆಗುತ್ತಾ ಹೋಗುತ್ತದೆ.

ಮಿಥುನ ರಾಶಿ

ರಾಜಕೀಯವಾಗಿ ಆಡಳಿತದಲ್ಲಿ ಪರೋಕ್ಷವಾದ ಅಧಿಕಾರ ಸಿಗಲಿದೆ. ಕೃಷಿಕರಿಗೆ ಉತ್ತಮ ಧನ ಧಾನ್ಯ ಸಮೃದ್ಧಿ ಲಭಿಸುವುದು. ರಫ್ತು ಮಾರಾಟಗಳಿಂದ ಆದಾಯ ಹೆಚ್ಚಲಿದೆ. ಸಂತಾನ ಪ್ರಾಪ್ತಿಯಾಗಲಿದ್ದು ಸಂಸಾರದಲ್ಲಿ ಸಂತೃಪ್ತ ಜೀವನ ನಡೆಸುವಿರಿ.

ಮಹಿಳೆಯರಿಗೆ ವಸ್ತ್ರಾಭರಣ, ಉನ್ನತ ಉದ್ಯೋಗ, ಶಿಕ್ಷಣ ಹಾಗೂ ಪ್ರಾಪ್ತ ವಯಸ್ಕರಿಗೆ ವಿವಾಹ ಮುಂತಾದ ಶುಭ ಫಲ ದೊರೆಯಲಿದೆ. ಭೂಮಿ ಮತ್ತು ಸ್ಥಿರಾಸ್ತಿಗಳು ನಿಮ್ಮದಾಗಲಿವೆ. ಪಾಲುದಾರಿಕೆ ವ್ಯವಹಾರಗಳು ಸರಾಗವಾಗಿ ನಡೆದು ಲಾಭವಿರುವುದು. ಯುವ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ಅವಕಾಶಗಳು ಲಭಿಸುವುದು.

ಕರ್ಕಾಟಕ ರಾಶಿ

ಕಾರ್ಮಿಕರಿಗೆ, ವೃತ್ತಿ ತರಬೇತಿ ಹೊಂದಿದ ಕುಶಲ ಕರ್ಮಿಗಳಿಗೆ ಆದಾಯ ಹೆಚ್ಚಲಿದೆ. ಈ ವರ್ಷ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆತು ಉನ್ನತ ಪದವಿ ದೊರೆಯಲಿದೆ. ಸೂಕ್ತ ಸಲಹೆಗಳನ್ನು ಪಡೆದುಕೊಂಡು ವ್ಯಾಪಾರ ವಹಿವಾಟುಗಳನ್ನು ನಡೆಸುವುದು ಉತ್ತಮ. ಕೋರ್ಟು ವ್ಯವಹಾರಗಳು ನಿಮ್ಮಂತೆಯೇ ಆಗಲಿದೆ.

ಆಕಸ್ಮಿಕ ರೀತಿಯಲ್ಲಿ ಉದ್ಯೋಗ ದೊರೆತು ಅಚ್ಚರಿ ಉಂಟಾಗುವುದು. ವ್ಯಾಸಂಗದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡುಬರುವುದು. ಖಾದ್ಯ ತೈಲ, ಮತ್ತು ರಸ ಪದಾರ್ಥಗಳ ಮಾರಾಟಗಾರರಿಗೆ ವಿಶೇಷ ಲಾಭವಿದೆ.

ಕುಲದೇವರ ದರ್ಶನದಿಂದ ಹೆಚ್ಚಿನ ಕಾರ್ಯಗಳನ್ನು ಸಿದ್ಧಿಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರ ಲಾಭ ಪಡೆಯುವ ಮೂಲಕ ಕೌಟುಂಬಿಕದ ಸಮಸ್ಯೆಯಿಂದ ಹೊರ ಬರಬಹುದು.

ಸಿಂಹ ರಾಶಿ

ಶ್ರೀ ಆಂಜನೇಯನನ್ನು ಸ್ಮರಿಸಿ. ಮನೆಯಲ್ಲಿ ಸುಖ ಸಂತೋಷಗಳನ್ನು ಹೆಚ್ಚಿಸುವುವು. ವಿದ್ಯಾಭ್ಯಾಸದಲ್ಲಿ ಆಸಕ್ತಿಯಿಂದ ಹೊಸ ಹೊಸ ವಿಚಾರಗಳನ್ನು ಕಲಿಯಬಹುದು.  ಉದ್ಯೋಗಿಗಳಿಗೆ  ಹಣಕಾಸಿನ ಸಮಸ್ಯೆಗಳು ಬರತೊಡಗುತ್ತವೆ.

ವಿವಾಹದಲ್ಲಿ ಪ್ರೀತಿಸಿದ ಹಾಗೆ ಮದುವೆ ಯೋಗ ಇರುತ್ತದೆ. ವೃದ್ಧರು ಹೆಚ್ಚಿನ ಚಿಂತನೆಗಳನ್ನು ಮಕ್ಕಳ ಹತ್ತಿರ ಮಂಡಿಸಬೇಕು.
ವಿದ್ಯಾಭ್ಯಾಸದಲ್ಲಿ ತೊಂದರೆ ಆಗಬಹುದು. ಶ್ರದ್ಧೆ ವಹಿಸಿ ಸಲಹೆ ಪಡೆಯುವುದು ಉತ್ತಮ. ಉದ್ಯೋಗದಲ್ಲಿ ಬಹಳ ಯಶಸ್ಸು ಸಿಗುತ್ತದೆ. ಪ್ರೀತಿಯ ಜೀವ ವಿಶ್ವಾಸ ವ್ಯಕ್ತಪಡಿಸುತ್ತದೆ.

ದಿನ ನಿತ್ಯದ ಜೀವನದಲ್ಲಿರಲಿ ಸರಳ ವಾಸ್ತು ಟಿಪ್ಸ್

ಕನ್ಯಾ ರಾಶಿ

ಆತುರದಲ್ಲಿ ಹೋಗಬೇಡಿ. ವಿವಾಹದಲ್ಲಿ ಅಡೆ ತಡೆ ನೆಚ್ಚಿನ ನೆರೆ ಹೊರೆಯವರಿಂದ ಬರುತ್ತದೆ. ವಾದಗಳು ಮಂಡಿಸಬೇಕು. ವೃದ್ಧರು ಮಕ್ಕಳ ಜೊತೆಗೆ ವೈದ್ಯಕೀಯ ಸಲಹೆಗಳು ಪಡೆಯುವುದರಿಂದ ಆರೋಗ್ಯವನ್ನು ಕಾಪಾಡಬಹುದು.

ಈ ದಿನ ದೈವ ಕಾರ್ಯಗಳಲ್ಲಿ ಹೆಚ್ಚು ತೊಡಗುವಿರಿ. ಸ್ನೇಹಿತನ ಜೊತೆ ಸೇರಿ ಹೊಸ ವ್ಯಾಪಾರ ಮಳಿಗೆ ಪ್ರಾರಂಭಿಸುವಿರಿ. ವಾಣಿಜ್ಯ ಸಂಕೀರ್ಣ ಅಥವಾ ಅಪಾರ್ಟ್‌ಮೆಂಟ್‌ನ ಒಡೆಯರಾಗುವ ಲಕ್ಷಣಗಳಿವೆ. ರೇಷ್ಮೇ, ಹತ್ತಿ ಮತ್ತು ಕಬ್ಬು ಬೆಳೆಗಳಿಂದ ನಿರೀಕ್ಷೆಗೂ ಮೀರಿದ ಲಾಭ.

ತುಲಾ ರಾಶಿ

ಹಾರ್ಡ್ವೇರ್ ವಸ್ತುಗಳ ಮಾರಾಟದಿಂದ ಹೆಚ್ಚಿನ ಆದಾಯ ಕಾಣುವಿರಿ. ದಂತ ವೈದ್ಯರು ಮತ್ತು ಸಿವಿಲ್ ಇಂಜಿನೀಯರುಗಳಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಂಭವವಿದೆ. ಆತ್ಮಸ್ಥೈರ್ಯದಿಂದ ಕೆಲಸ ಕಾರ್ಯಗಳನ್ನು ಹುರುಪಿನಿಂದ ಮಾಡುವಿರಿ.

ಕೈಗಾರಿಕೆ ವಲಯದಲ್ಲಿ ಭಾರಿ ಯಶಸ್ಸನ್ನು ಕಾಣುವಿರಿ. ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು. ಆರ್ಥಿಕವಾಗಿ ಅಭಿವದ್ಧಿ ಹೊಂದುವಿರಿ. ಕುಟುಂಬ ವರ್ಗದವರಲ್ಲಿ ಉತ್ತಮ ಆರೋಗ್ಯವಿರುವುದು. ಮದುವೆಯ ವಿಳಂಬದ ಕಾರ್ಯ ಒತ್ತಡ ತಂದು ಮಾನಸಿಕತೆಗೆ ಗುರಿ ಮಾಡುತ್ತದೆ.

ವೃಶ್ಚಿಕ ರಾಶಿ

ಬಂಧು ಮಿತ್ರರಿಗೆ ಸಹಾಯ ಮಾಡುವಿರಿ. ತಾಂತ್ರಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರಶಸ್ತಿ ಲಭಿಸಲಿದೆ. ಸ್ಥಾನಮಾನಗಳು ಲಭ್ಯವಾಗಲಿದ್ದು ಕೀರ್ತಿ ಪ್ರತಿಷ್ಠೆಗಳು ಹೆಚ್ಚಲಿದೆ. ಸಾಹಿತಿ ಬರಹಗಾರರಿಗೆ ಹಾಗೂ ಚಲನ ಚಿತ್ರರಂಗದವರಿಗೆ ಹಣದ ಜೊತೆಗೆ ಖ್ಯಾತಿಯೂ ದೊರೆಯುವುದು.

ಕೆತ್ತನೆ ಕೆಲಸಗಾರರಿಗೆ, ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಮತ್ತು ಆದಾಯವಿದೆ. ಎಣ್ಣೆ, ಬೇಳೆ, ಕಾಳುಗಳ ಬೆಳೆಗಳಿಂದ ಆದಾಯ ಹೆಚ್ಚಲಿದೆ. ಶ್ರೀ ಶಾರದಾ ಮಾತೆಯನ್ನು ಸ್ಮರಿಸಿ. ಶ್ರೀ ಗಾಯತ್ರಿ ಜಪವನ್ನು ಮಾಡುವುದರಿಂದ ಹೆಚ್ಚಿನ ಏಳಿಗೆ ಸಾಧ್ಯ. ಶ್ರೀ ದಕ್ಷಿಣಾಮೂರ್ತಿಯನ್ನು ಆರಾಧಿಸಿ.

ದಾಂಪತ್ಯ ಜೀವನದ ದೃಷ್ಟಿಯಿಂದ ದಿನವೂ ತುಂಬಾ ಉತ್ತಮವಾಗಲಿದೆ. ಕೆಂಪು ವಸ್ತ್ರ ದಾನ ಮಾಡುವ ಮೂಲಕ ಅದೃಷ್ಟ ಪಡೆಯಬಹುದು.

ಧನಸ್ಸು ರಾಶಿ

ಯಾವುದೇ ಪ್ರಯೋಜನವನ್ನು ಸಂಗಾತಿ ಮತ್ತು ಕುಟುಂಬ ಸದಸ್ಯರಿಂದ ಪಡೆಯಬಹುದು. ಇಂದು ಅನುಕೂಲಕರ ದಿನ. ಪ್ರಯಾಣಕ್ಕೆ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗೆ ಉತ್ತಮ ಸಂಬಂಧಗಳು ರೂಪುಗೊಳ್ಳುತ್ತವೆ ಮತ್ತು ಅವರಿಂದ ಯಾವುದೇ ಕೆಲಸವನ್ನು ನೀವು ತಿಳಿದುಕೊಳ್ಳುವಿರಿ.

ಇಂದು ಆರಂಭದಲ್ಲಿ ಸ್ವಲ್ಪ ತೊಂದರೆ ನೀಡಬಹುದು, ಆದರೆ ನಿಮ್ಮ ಬುದ್ಧಿವಂತಿಕೆಯೊಂದಿಗೆ ಎಲ್ಲಾ ಸವಾಲುಗಳನ್ನು ಎದುರಿಸಲು ನಿಮಗೆ ಸಾಧ್ಯವಾಗುತ್ತದೆ.

ಪ್ರೀತಿಯ ಜೀವನಕ್ಕೆ ದಿನ ಅನುಕೂಲಕರವಾಗಿಲ್ಲ. ಆದ್ದರಿಂದ, ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಿ.

ಮಕರ ರಾಶಿ

ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಇರಬಹುದು, ಆದರೆ ಇನ್ನೂ ಜೀವನ ಸಂಗಾತಿ ಅದರ ಪರವಾಗಿ ನಿಮ್ಮನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕಾನೂನಿನ ವಿರುದ್ಧ ಹೋಗಿ ಏನಾದರೂ ಮಾಡುವುದರಿಂದ ನಿಮಗೆ ತೊಂದರೆಯಾಗಬಹುದು.

ವೆಚ್ಚವನ್ನು ನಿಗ್ರಹಿಸಲು ಇದು ಅಗತ್ಯವಾಗಿರುತ್ತದೆ. ದಿನ ಕೆಲಸದಲ್ಲಿ ನಿರತವಾಗಿರುತ್ತದೆ. ಇಂದು ಯಾರಿಗೂ ಸಾಲ ನೀಡಬೇಡಿ. ನಿಮ್ಮ ದುಡಿಮೆ, ನಿಷ್ಠೆ ಆತ್ಮವಿಶ್ವಾಸ ವೃತ್ತಿರಂಗದಲ್ಲಿ ಯಶಸ್ಸಿನೊಡನೆ ಸಂಪತ್ತನ್ನು ವೃದ್ಧಿಸಲಿದೆ. ನಿಮ್ಮ ಕನಸುಗಳು ಸುಲಭದಲ್ಲಿ ನನಸಾಗಲಿವೆ. ಪ್ರೀತಿ ಮಾಡುವುದರಿಂದ ಮನೆಯಿಂದ ಜಗಳ ಬರುವ ಸಾಧ್ಯತೆ ಇದೆ.

ಸಂಪತ್ತು ಪ್ರಾಪ್ತಿಗೆ ತ್ರಿಶಕ್ತಿ ಪೂಜೆಯನ್ನು ಈ ರೀತಿ ಮಾಡಿ

ಕುಂಭ ರಾಶಿ

ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿಯು ಹೆಚ್ಚಾಗುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರುತ್ತವೆ. ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ ಉಂಟಾಗಿ ಸಮಸ್ಯೆಗಳು ಬಗೆಹರಿಯುತ್ತವೆ. ಸಂಗೀತ, ಧ್ಯಾನ ಮತ್ತು ಯೋಗಗಳಿಂದ ಮನಸ್ಸಿಗೆ ನೆಮ್ಮದಿ ಪಡೆಯುವಿರಿ.

ವಸ್ತ್ರಾಭರಣದ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ಹಾಗೂ ಲಾಭ. ವಿದೇಶಿ ವ್ಯವಹಾರಗಳಲ್ಲಿ ಜಯದ ಜೊತೆಗೆ ವಿದೇಶಕ್ಕೆ ಪ್ರಯಾಣ ಮಾಡಬೇಕಾದ ಒಂದು ಒಳ್ಳೆಯ ಸಂದರ್ಭ ಬರುವುದು. ದ್ವಿಚಕ್ರ ವಾಹನಗಳ ಮಾರಾಟಗಾರರಿಗೆ ಹೆಚ್ಚಿನ ವ್ಯವಹಾರವಿದ್ದು, ಲಾಭ ಇಮ್ಮಡಿಯಾಗುವಂಥ ಅವಕಾಶಗಳನ್ನು ಹೊಂದುವರು. ಮನಸ್ಸಂಕಲ್ಪದಂತೆ ಕಾರ್ಯಗಳು ನೆರವೇರಿ ಮುನ್ನಡೆ ಸಾಧಿಸುವಿರಿ.

ಮೀನ ರಾಶಿ

ವ್ಯಾಪಾರ, ವ್ಯವಹಾರಗಳು ಸ್ಪರ್ಧಾತ್ಮಕ ರೀತಿಯಲ್ಲಿ ಮುಂದುವರಿಯಲಿವೆ. ತೋಟಗಾರಿಕೆ ಕ್ಷೇತ್ರದವರಿಗೆ ಅದರಲ್ಲೂ ಹೂ – ಹಣ್ಣು ವ್ಯಾಪಾರಿಗಳಿಗೆ ಉತ್ತಮ ಸಂಪಾದನೆ ಇರುವುದು. ಉದ್ಯೋಗದಲ್ಲಿನ ಬದಲಾವಣೆಯನ್ನು ಬಯಸಿದ ನಿಮಗೆ ನಿಮ್ಮಿಚ್ಛೆಯಂತೆಯೇ ಹೆಚ್ಚಿನ ಆದಾಯವು ದೊರೆಯುವುದು.

ಯಂತ್ರೋಪಕರಣಗಳ ಮಾರಾಟವನ್ನು ಹೆಚ್ಚಿಸಿಕೊಂಡು ಆದಾಯವನ್ನೂ ಹೆಚ್ಚಿಸಿಕೊಳ್ಳುವಿರಿ. ಡೈರಿ ಪದಾರ್ಥಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಉತ್ಪಾದನೆಯಿಂದ ಲಾಭ ಇರುವುದು. ಶ್ರೀ ಶೃಂಗೇರಿ ಶಾರದಾಂಬೆಯ ಕೃಪೆಯಿಂದ ಎಲ್ಲ ಕೆಲಸದಲ್ಲಿ ಜಯವನ್ನು ಪಡೆಯುವಿರಿ.

ಈ ದಿನ ಶುಭಫಲಗಳು ಒಂದೊಂದಾಗಿ ಗೋಚರಕ್ಕೆ ಬರಲಿವೆ. ಮನೆಯ ನಿರ್ಮಾಣದ ನಂತರ ಅನೇಕ ಉತ್ತಮ ಗುಣಮಟ್ಟದ ವ್ಯವಹಾರ ನಡೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...