alex Certify ವಾಸ್ತು ಪ್ರಕಾರ ಮನೆಯಲ್ಲಿಡಿ ʼಶ್ರೀಕೃಷ್ಣʼನ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಸ್ತು ಪ್ರಕಾರ ಮನೆಯಲ್ಲಿಡಿ ʼಶ್ರೀಕೃಷ್ಣʼನ ಫೋಟೋ

ವಾಸ್ತು ಪ್ರಕಾರ, ದೇವರ ಚಿತ್ರಗಳನ್ನು ಮನೆಯಲ್ಲಿ ಇಡುವುದು ಶುಭ. ದೇವರ ವಿಭಿನ್ನ ಚಿತ್ರಗಳ ಪ್ರಾಮುಖ್ಯತೆಯೂ ವಿಭಿನ್ನವಾಗಿದೆ. ಶ್ರೀ ಕೃಷ್ಣನ ವಿವಿಧ ರೂಪಗಳು ಸ್ಪೂರ್ತಿದಾಯಕವಾಗಿವೆ. ಕೃಷ್ಣ ಜನ್ಮಾಷ್ಠಮಿಯ ಸಂದರ್ಭದಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ಶ್ರೀಕೃಷ್ಣನ ಯಾವ ಚಿತ್ರವನ್ನು ಮನೆಯ ಯಾವ ಸ್ಥಳದಲ್ಲಿ ಇಡಬೇಕು ಎಂಬುದರ ವಿವರ ಇಲ್ಲಿದೆ.

ಮನೆಯ ಈಶಾನ್ಯ ದಿಕ್ಕಿನಲ್ಲಿ ಲಡ್ಡು ಗೋಪಾಲನ ಫೋಟೋವನ್ನು ಹಾಕುವುದ್ರಿಂದ ಮನೆಯಲ್ಲಿ ಪ್ರೀತಿ ತುಂಬಿರುತ್ತದೆ. ಮನೆಯಲ್ಲಿ 12 ವರ್ಷ ವಯಸ್ಸಿನ ಮಕ್ಕಳಿದ್ದರೆ ಬಾಲ ಗೋಪಾಲನ ಫೋಟೋವನ್ನು ಹಾಕಿ. ಇದು ಮಕ್ಕಳ ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಮನೆ ಪೂರ್ವದಲ್ಲಿ  ಕೃಷ್ಣನ ಗೋಪಾಲ ರೂಪದ ಚಿತ್ರವನ್ನು ಹಾಕಿ. ಇದು ಸಂಪತ್ತು, ಧಾನ್ಯ ಮತ್ತು ಧರ್ಮವನ್ನು ನೀಡಬಲ್ಲದು.

ಆಗ್ನೇಯ ದಿಕ್ಕಿನಲ್ಲಿ ವಿರಾಟ ರೂಪದ ಫೋಟೋವನ್ನು ಹಾಕಿ. ಇದು ಶಕ್ತಿಯ ಸೂಚಕವಾಗಿದೆ. ದಕ್ಷಿಣ ದಿಕ್ಕಿನಲ್ಲಿ ಗೋವರ್ಧನ ಪರ್ವತವನ್ನು ಮೇಲಕ್ಕೆತ್ತಿದ  ಕೃಷ್ಣನ ಫೋಟೋವನ್ನು ಹಾಕಿ. ಇದು ರಕ್ಷಣೆಯ ಸಂಕೇತವಾಗಿದೆ. ಸುರಕ್ಷಿತ ಮತ್ತು ಆರಾಮದಾಯಕ ಜೀವನಕ್ಕೆ ಇದು ಸಹಕಾರಿ.

ನೈರುತ್ಯ ದಿಕ್ಕಿಗೆ ಕೃಷ್ಣನ ಸುದರ್ಶನ ಚಕ್ರಧಾರಿ ರೂಪದ ಪ್ರತಿಮೆ ಅಥವಾ ಫೋಟೋವನ್ನು ಹಾಕಿ. ದ್ವಾರಕಾಧೀಶನ ಫೋಟೋವನ್ನು ಪಶ್ಚಿಮ ದಿಕ್ಕಿಗೆ ಹಾಕಬೇಕು. ಇದು ಗೌರವ ಹೆಚ್ಚಿಸುತ್ತದೆ. ರಾಧಾ-ಕೃಷ್ಣ ಮತ್ತು ರಾಸಲೀಲೆ ಫೋಟೋವನ್ನು ವಾಯುವ್ಯ ದಿಕ್ಕಿಗೆ ಇಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...