alex Certify ರಾಶಿಗನುಸಾರ ತಾಯಿ ದುರ್ಗೆಗೆ ಅರ್ಪಿಸಿ ಈ ʼಹೂʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಶಿಗನುಸಾರ ತಾಯಿ ದುರ್ಗೆಗೆ ಅರ್ಪಿಸಿ ಈ ʼಹೂʼ

ನವರಾತ್ರಿ ಸಂಭ್ರಮ ಆರಂಭವಾಗಿದೆ.  ತಾಯಿ ದುರ್ಗೆ ಕೃಪೆಗೆ ಪಾತ್ರರಾಗಬೇಕೆನ್ನುವವರು ನವರಾತ್ರಿ ಸಂದರ್ಭದಲ್ಲಿ ರಾಶಿಗನುಸಾರವಾಗಿ ಹೂ ಅರ್ಪಿಸಬೇಕು.

ಮೇಷ : ಈ ರಾಶಿಯವರು ನವರಾತ್ರಿಯಂದು ತಾಯಿಗೆ ದಾಸವಾಳ, ಗುಲಾಬಿ, ಕೆಂಪು ಕಮಲವನ್ನು ಅರ್ಪಿಸಬೇಕು.

ವೃಷಭ : ಈ ರಾಶಿಯವರು ಬಿಳಿ ಕಮಲ, ದಾಸವಾಳ, ಕೋಟೆ ಹೂ, ಸದಾಪುಷ್ಪ ಹೂ ಅಥವಾ ಬಿಳಿ ಹೂವನ್ನು ಅರ್ಪಿಸಬೇಕು.

ಮಿಥುನ : ಈ ರಾಶಿಯವರು ಹಳದಿ ಗಣಗಲೆ ಹೂ, ದಾಸವಾಳ, ನಿತ್ಯ ಪುಷ್ಪ, ಗೊಂಡೆ ಹೂವನ್ನು ಅರ್ಪಿಸಬೇಕು.

ಕರ್ಕ ರಾಶಿ : ಇವರು ಬಿಳಿ ಕಮಲ, ಬಿಳಿ ಗಣಗಲೆ, ಬಿಳಿ ಗೊಂಡೆ, ದಾಸವಾಳ, ಸದಾಪುಷ್ಪ, ಮಲ್ಲಿಗೆ, ರಾತ್ರಿ ರಾಣಿ ಸೇರಿದಂತೆ ಬಿಳಿ ಬಣ್ಣದ ಯಾವುದೇ ಹೂ ಅರ್ಪಿಸಬೇಕು.

ಸಿಂಹ : ಈ ರಾಶಿಯವರು ಕಮಲ, ಗುಲಾಬಿ, ದಾಸವಾಳ ಹೂವನ್ನು ಅರ್ಪಿಸಬೇಕು.

ಕನ್ಯಾ : ಈ ರಾಶಿಯವರು ದಾಸವಾಳ, ಗುಲಾಬಿ, ಗೊಂಡೆ ಹೂವನ್ನು ಅರ್ಪಿಸಬೇಕು.

ತುಲಾ : ಇವರು ಬಿಳಿ ಬಣ್ಣದ ಹೂವನ್ನು ಅರ್ಪಿಸಬೇಕು. ಬಿಳಿ ಕಮಲ, ಗಣಗಲೆ, ಗೊಂಡೆ, ದಾಸವಾಳ, ಪಾರಿಜಾತ, ಮಲ್ಲಿಗೆ, ಸದಾಪುಷ್ಪವನ್ನು ಅರ್ಪಿಸಬೇಕು.

ವೃಶ್ಚಿಕ : ಈ ರಾಶಿಯವರು ಕೆಂಪು ಹೂ, ಹಳದಿ ಹೂ, ಗುಲಾಬಿ ಹೂಗಳನ್ನು ಅರ್ಪಿಸಬೇಕು.

ಧನು : ಈ ರಾಶಿಯವರು ಗುಲಾಬಿ, ದಾಸವಾಳ, ಕರವಿರ, ಕಮಲದ ಹೂವನ್ನು ಅರ್ಪಿಸಬೇಕು.

ಮಕರ : ಈ ರಾಶಿಯವರು ನೀಲಿ ಹೂ, ಕಮಲ, ಗುಲಾಬಿ ಹೂವನ್ನು ಅರ್ಪಿಸಬೇಕು.

ಕುಂಭ : ಈ ರಾಶಿಯವರು ಎಲ್ಲ ರೀತಿಯ ಕಮಲ, ಮಲ್ಲಿಗೆ, ರಾತ್ರಿರಾಣಿ ಹೂವನ್ನು ಅರ್ಪಿಸಬೇಕು.

ಮೀನ : ಈ ರಾಶಿಯವರು ಹಳದಿ ಕರವಿರ, ಎಲ್ಲ ರೀತಿಯ ಕಮಲ, ಗುಲಾಬಿಯನ್ನು ಅರ್ಪಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...