alex Certify ನವರಾತ್ರಿಯಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿಯಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ತಾಯಿ ದುರ್ಗೆ ಆರಾಧನೆ ಮಾಡುವ ನವರಾತ್ರಿ ಶುರುವಾಗಿದೆ. ಅನೇಕರು 9 ದಿನಗಳ ಕಾಲ ಪೂಜೆ ಮಾಡ್ತಾರೆ. ಕಳಶ ಸ್ಥಾಪನೆ ಮಾಡಿ, ವೃತ ಮಾಡಿ ಭಕ್ತಿಯಿಂದ ಆರಾದನೆ ಮಾಡ್ತಾರೆ. ಮತ್ತೆ ಕೆಲವರು ಕೊನೆಯ 3 ದಿನ ದೇವಿ ಪೂಜೆ ಮಾಡ್ತಾರೆ. ಆದ್ರೆ ನವರಾತ್ರಿಯ 9 ದಿನ ಕೆಲವೊಂದು ಕೆಲಸವನ್ನು ಮಾಡಬಾರದು.

ನವರಾತ್ರಿಯ 9 ದಿನ ಅಪ್ಪಿತಪ್ಪಿಯೂ ಮಾಂಸ, ಮೀನಿನ ಆಹಾರ ಸೇವನೆ ಮಾಡಬೇಡಿ. ಹಾಗೆ ಮದ್ಯಪಾನ, ಧೂಮಪಾನ ಮಾಡಬೇಡಿ.

ನವರಾತ್ರಿ ಸಮಯದಲ್ಲಿ ಈರುಳ್ಳಿ – ಬೆಳ್ಳುಳ್ಳಿಯನ್ನು ಸೇವಿಸಬೇಡಿ. ಇದು ತಾಯಿ ಕೋಪಕ್ಕೆ ಕಾರಣವಾಗುತ್ತದೆ.

ನವರಾತ್ರಿಯ 9 ದಿನ ಉಗುರು ಕತ್ತರಿಸಬೇಡಿ. ಹಾಗೆ ಕೂದಲು ಕತ್ತರಿಸುವುದು, ಗಡ್ಡ ತೆಗೆಯುವುದು ಮಾಡಬೇಡಿ.

ಅಖಂಡ ಜ್ಯೋತಿಯನ್ನು ಹಚ್ಚಿರುವವರು ಅಪ್ಪಿತಪ್ಪಿಯೂ ಒಂದು ಕ್ಷಣ ಕೂಡ ಮನೆಯನ್ನು ಖಾಲಿ ಬಿಡಬಾರದು. ಒಬ್ಬರಾದ್ರೂ ಮನೆಯಲ್ಲಿ ಇರಬೇಕು.

ನವರಾತ್ರಿ ವೃತ ಮಾಡ್ತಿದ್ದರೆ ಖುರ್ಚಿ, ಸೋಫಾ ಮೇಲೆ ಕುಳಿತುಕೊಳ್ಳಬೇಡಿ. ನೆಲದ ಮೇಲೆ ಕುಳಿತುಕೊಳ್ಳಿ. ಹಾಗೆ ಹಗಲಿನಲ್ಲಿ ನಿದ್ರೆ ಮಾಡಬೇಡಿ.

ನವರಾತ್ರಿ ಸಂದರ್ಭದಲ್ಲಿ ಕೋಪ ಮಾಡಿಕೊಳ್ಳಬೇಡಿ. ಮನೆಯಲ್ಲಿರುವ ಹೆಣ್ಣು ಮಕ್ಕಳ ಮೇಲೆ ಅಪ್ಪಿತಪ್ಪಿಯೂ ಕೋಪ ಮಾಡಿಕೊಳ್ಳಬೇಡಿ.

ಸಂಪೂರ್ಣ ಬ್ರಹ್ಮಚರ್ಯವನ್ನು ಪಾಲಿಸಬೇಕು. ಶಾರೀರಿಕ ಸಂಬಂಧವನ್ನು ಬೆಳೆಸಬಾರದು. ನವರಾತ್ರಿಯ 9 ದಿನ ಒಳ್ಳೆ ಆಲೋಚನೆಯಲ್ಲಿಯೇ ಸಮಯ ಕಳೆಯಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...