alex Certify ಹನುಮಾನ್ ಜಯಂತಿಯಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹನುಮಾನ್ ಜಯಂತಿಯಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಹಿಂದು ಧರ್ಮದ ಪ್ರಕಾರ ಹನುಮಂತ ಚೈತ್ರ ಪೂರ್ಣಿಮೆ ದಿನ ಜನಿಸಿದನಂತೆ. ಭಾರತದಲ್ಲಿ ಈ ದಿನವನ್ನು ಹನುಮಾನ್ ಜಯಂತಿಯಾಗಿ ಆಚರಿಸಲಾಗುತ್ತದೆ. ಹನುಮಂತ ಸಹಾನುಭೂತಿ ಹಾಗೂ ಸಂತೋಷದ ದೇವರು. ಅವನ ಆರಾಧನೆಯಲ್ಲಿ ತಪ್ಪಾದ್ರೆ ಆತ ಶೀಘ್ರ ಕೋಪಗೊಳ್ತಾನೆ.

ಹನುಮಂತನ ಆರಾಧನೆ ವೇಳೆ ಚರಣಾಮೃತವನ್ನು ಬಳಸಬಾರದು. ಇದು ಹನುಮಂತನ ಕೋಪಕ್ಕೆ ಕಾರಣವಾಗಬಹುದು.

ಸೂತಕದ ಸಮಯದಲ್ಲಿ ಹಿಂದು ಧರ್ಮದಲ್ಲಿ ಯಾವುದೇ ದೇವರ ಪೂಜೆ ನಡೆಯುವುದಿಲ್ಲ. ಹನುಮಂತನ ಪೂಜೆಯನ್ನು ಕೂಡ ಸೂತಕದ ಸಮಯದಲ್ಲಿ ಮಾಡಬಾರದು. ಸೂತಕದ 13 ದಿನಗಳ ಕಾಲ ಯಾವುದೇ ಪೂಜೆ ಮಾಡಬಾರದು.

ಹನುಮಂತನ ಆರಾಧನೆ ಮಾಡುವವರು ಮಂಗಳವಾರ ಹಾಗೂ ಹನುಮಾನ್ ಜಯಂತಿ ವೇಳೆ ಉಪ್ಪನ್ನು ಸೇವನೆ ಮಾಡಬಾರದು. ದಾನ ಮಾಡಿದ ವಸ್ತುಗಳು ಅದ್ರಲ್ಲೂ ವಿಶೇಷವಾಗಿ ಸಿಹಿ ತಿಂಡಿಯನ್ನು ಸೇವಿಸಬಾರದು.

ಹನುಮಂತನ ದಿನದಂದು ಕಪ್ಪು ಹಾಗೂ ಬಿಳಿ ಬಟ್ಟೆಯನ್ನು ಧರಿಸಬಾರದು. ಕೆಂಪು ಅಥವಾ ಹಳದಿ ಬಟ್ಟೆ ಧರಿಸುವುದು ಶುಭಕರ.

ಹನುಮಂತನ ಆರಾಧನೆ ವೇಳೆ ಬ್ರಹ್ಮಚರ್ಯ ಪಾಲನೆ ಮಾಡಬೇಕು. ಅಂದ್ರೆ ಹನುಮಂತನ ಪೂಜೆ ವೇಳೆ ಮಹಿಳೆಯರಿಂದ ದೂರವಿರಬೇಕು.

ಮುರಿದ ಹಾಗೂ ಹಾಳಾದ ಹನುಮಂತನ ಮೂರ್ತಿಯನ್ನು ಪೂಜೆಗೆ ಬಳಸಬಾರದು. ಮಾಂಸ, ಮದ್ಯ ಸೇವನೆ ಕೂಡ ಮಾಡಬಾರದು.

ಹನುಮಾನ್ ಜಯಂತಿ ದಿನ ಹಗಲಿನಲ್ಲಿ ಮಲಗಬೇಡಿ. ಹನುಮಾನ್ ಚಾಲಿಸ್ ಪಠಿಸಿ. ಶಾಂತಿ ಪ್ರಿಯ ಹನುಮಂತನ ಕೆಣಕುವ ಪ್ರಯತ್ನ ಮಾಡಬೇಡಿ. ದೈಹಿಕ ಸಂಬಂಧ ಬೆಳೆಸಬೇಡಿ.

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್, 9900494333

ವಿಳಾಸ:- ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ,

10th ಕ್ರಾಸ್, ಸಂಪಿಗೆ ರಸ್ತೆ, ಮಹಾಗಣಪತಿ ದೇವಸ್ಥಾನ ಹತ್ತಿರ,

ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...