ಬೆಂಗಳೂರು : ವಿವಾಹಿತ ಮಹಿಳೆಯನ್ನ ಉಸಿರುಗಟ್ಟಿಸಿ ಕೊಂದು ಆರೋಪಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಲಲಿತಾ (49) ಎಂಬ ಮಹಿಳೆಯನ್ನ ಲಕ್ಷ್ಮೀನಾರಾಯಣ ಎಂಬಾತ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಇಂದಿರಾ ಪ್ರಿಯದರ್ಶಿನಿ ನಗರದ ಮನೆಯಲ್ಲಿ ಘಟನೆ ನಡೆದಿದೆ.
ಪತಿ ಸಾವಿನ ಬಳಿಕ ಲಲಿತಾ ಲಕ್ಷ್ಮೀನಾರಾಯಣನ ಜೊತೆ ವಾಸವಾಗಿದ್ದರು. ಲಲಿತಾ ನಡೆ ಪ್ರಶ್ನಿಸಿ ಲಕ್ಷ್ಮೀನಾರಾಯಣ ಆಗಾಗ ಜಗಳ ಮಾಡುತ್ತಿದ್ದನು. ನಿನ್ನೆ ರಾತ್ರಿ ಆರೋಪಿ ಆಕೆಯನ್ನ ವೇಲ್ ನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಲಕ್ಷ್ಮೀನಾರಾಯಣ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ತೊರೆದು ಲಕ್ಷ್ಮೀನಾರಾಯಣ ಲಲಿತಾ ಜೊತೆ ವಾಸವಿದ್ದನು. ಪತಿ ಸಾವಿನ ಬಳಿಕ ಲಲಿತಾ ಲಕ್ಷ್ಮೀನಾರಾಯಣನ ಜೊತೆ ವಾಸವಾಗಿದ್ದರು
