ನಿಂಬೆ ಹಣ್ಣು ವಿಟಮಿನ್ ಸಿ ಆಗರ. ಎಲ್ಲಾ ಋತುಮಾನದಲ್ಲೂ ಸುಲಭವಾಗಿ ಸಿಗುವ ನಿಂಬೆ ಹಣ್ಣನ್ನು ಪ್ರತಿಯೊಬ್ಬರೂ, ಪ್ರತಿದಿನ ಅಡುಗೆಗೆ ಬಳಸುತ್ತಾರೆ. ನಿಂಬೆ ಹಣ್ಣಿನ ರಸ ಹಿಂಡಿ ಸಿಪ್ಪೆಯನ್ನು ಬಿಸಾಡುವವರೆ ಹೆಚ್ಚು. ನಿಂಬೆ ಸಿಪ್ಪೆಯ ಕೆಲವು ಅದ್ಭುತ ಪ್ರಯೋಜನ ತಿಳಿದರೆ ಅದನ್ನು ಯಾರೂ ಬಿಸಾಡುವ ಮನಸ್ಸು ಮಾಡುವುದಿಲ್ಲ.
ನಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಮುಖಕ್ಕೆ ಫೇಸ್ ಪ್ಯಾಕ್ ಆಗಿ ಬಳಸಬಹುದು.
5-6 ನಿಂಬೆ ಸಿಪ್ಪೆಯನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ, ಅದಕ್ಕೆ ಸ್ವಲ್ಪ ಕಲ್ಲುಪ್ಪು ಹಾಗೂ 3-4 ಹೆಚ್ಚಿರುವ ಹಸಿ ಮೆಣಸಿನಕಾಯಿಯನ್ನು ಗಾಜಿನ ಬಾಟಲಿಯಲ್ಲಿ ಒಂದು ವಾರದವರೆಗೆ ಹಾಕಿಟ್ಟರೆ ಉಪ್ಪಿನಕಾಯಿಯಂತೆ ತಿನ್ನಬಹುದು.
ಜಿಡ್ಡು ಇರುವ ಪಾತ್ರೆ ತೊಳೆಯಲು ನಿಂಬೆ ಸಿಪ್ಪೆ ಉಪಯೋಗಕ್ಕೆ ಬರುತ್ತದೆ.