ಆನ್ಲೈನ್ನಲ್ಲಿ ಆರ್ಡರ್ ಮಾಡುವುದು ಒಂದು, ಪಾರ್ಸೆಲ್ ಬರುವುದು ಇನ್ನೊಂದು….. ಇಂಥ ಹಲವಾರು ನಿದರ್ಶನಗಳಿವೆ. ಅಮೆಜಾನ್ನಿಂದ ಮ್ಯಾಕ್ಬುಕ್ ಪ್ರೊ ಅನ್ನು ಆರ್ಡರ್ ಮಾಡಿದ ಈ ಇಂಗ್ಲೆಂಡ್ ವ್ಯಕ್ತಿಯೊಂದಿಗೆ ಇದೇ ರೀತಿ ಆಗಿದ್ದು, ಅದೀಗ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್ಡರ್ ಮಾಡಿದ ದುಬಾರಿ ಲ್ಯಾಪ್ಟಾಪ್ ಬದಲಿಗೆ ಐದು ಪೌಂಡ್ಗಳ ನಾಯಿ ಆಹಾರ ಇವರಿಗೆ ಪಾರ್ಸೆಲ್ ಬಂದಿದೆ!
ಅಲನ್ ವುಡ್ ತನ್ನ ಮಗಳಿಗೆ ನವೆಂಬರ್ನಲ್ಲಿ ಮ್ಯಾಕ್ಬುಕ್ ಪ್ರೊ ಅನ್ನು ಆರ್ಡರ್ ಮಾಡಿದರು ಮತ್ತು ಮರುದಿನದ ವಿತರಣೆಗಾಗಿ ಹೆಚ್ಚುವರಿ ಹಣವನ್ನು ಪಾವತಿಸಿದ್ದರು.
ಮನೆಗೆ ಪಾರ್ಸೆಲ್ ಬಂದಾಗ ಅವರಿಗೆ ಕಣ್ಣುಗಳನ್ನು ನಂಬಲು ಆಗಲಿಲ್ಲ. ನಾಯಿ ಆಹಾರ ಬಂದಿತ್ತು. ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ ಅಲನ್, “ನಾನು £ 1,000 (ಸುಮಾರು 1 ಲಕ್ಷ ರೂ.) ವೆಚ್ಚದ ಮ್ಯಾಕ್ಬುಕ್ ಪ್ರೊ ಬದಲಿಗೆ ನಾಯಿ ಆಹಾರ ಪಡೆದುಕೊಂಡೆ. ಈ ಬಗ್ಗೆ ಕಂಪೆನಿಯನ್ನು ಸಂಪರ್ಕಿಸಿದಾಗ ಏನೂ ಮಾಡಲು ಆಗುವುದಿಲ್ಲ ಎಂದು ಉತ್ತರ ಬಂತು. ಅದು ನನ್ನನ್ನು ಕೆರಳಿಸಿತು. ಅಮೆಜಾನ್ ಗ್ರಾಹಕ ಸೇವಾ ಸಿಬ್ಬಂದಿ ಕೂಡ ನನಗೆ ನೆರವಾಗಲು ನಿರಾಕರಿಸಿದರು ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ಇದು ವೈರಲ್ ಆಗುತ್ತಲೇ ಹಲವರು ತಮಗಾಗಿರುವ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ.