ನೃತ್ಯ ಮಾಡಲು ವಯಸ್ಸಿನ ಅಡ್ಡಿಯಿಲ್ಲ. ಬೇಧ ಭಾವವಿಲ್ಲದೇ ಸಂತೋಷದ ಸಮಾರಂಭದಲ್ಲಿ ಇತ್ತೀಚಿಗೆ ಕುಟುಂಬಸ್ಥರು ನೃತ್ಯ ಮಾಡೋದು ಸಾಮಾನ್ಯವಾಗಿದೆ. ಅದೇ ರೀತಿ ತಂದೆ – ಮಗಳು ಮದುವೆ ಸಂಭ್ರಮದಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಖ್ಯಾತ ಜೆಹ್ಡಾ ನಶಾ ಹಾಡಿಗೆ ಪಾಕಿಸ್ತಾನದ ತಂದೆ- ಮಗಳು ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ವಿವಾಹ ಸಮಾರಂಭದಲ್ಲಿ ತಂದೆ- ಮಗಳು ಡ್ಯಾನ್ಸ್ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಕೊಂಡಾಡಿದ್ದಾರೆ.
ಈ ವಿಡಿಯೋವನ್ನು ವೆಡ್ಡಿಂಗ್ ಫೋಟೋಗ್ರಫಿ ಸ್ಟುಡಿಯೋ ವಾಸಿಲಾ ಸ್ಟುಡಿಯೋ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ಮದುವೆಯಲ್ಲಿ ಹಲವಾರು ಅತಿಥಿಗಳು ಸುತ್ತಮುತ್ತ ನೆರೆದಿದ್ದು ತಂದೆ – ಮಗಳು ಅವರ ಮುಂದೆ ಜೆಹ್ಡಾ ನಶಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಂದೆ-ಮಗಳು ತಮ್ಮ ಅಭಿನಯವನ್ನು ಅದ್ಭುತವಾಗಿ ಸಂಯೋಜಿಸುತ್ತಾ, ಸಂಪೂರ್ಣವಾಗಿ ನೃತ್ಯವನ್ನು ಆನಂದಿಸುತ್ತಿದ್ದಾರೆ.
https://www.youtube.com/watch?v=D8ZfBV8U5W0