ಕೆಲವರಿಗೆ ಪ್ರಾಣಿಗಳನ್ನು ಕಂಡಾಗ ಸುಮ್ಮನೆ ಹೊಡೆಯುವುದು, ಕಲ್ಲಿನಿಂದ ಹಿಂಸಿಸುವುದು ರೂಢಿ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಹುಡುಗನೊಬ್ಬ ಆನೆಯನ್ನು ಓಡಿಸಲು ಕೋಲಿನಿಂದ ಹೊಡೆಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುರೇಂದರ್ ಮೆಹ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಶ್ರೀ ಮೆಹ್ರಾ ಭಾನುವಾರ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆನೆಗಳ ಗುಂಪು ಬರುತ್ತಿರುವ ಸಂದರ್ಭದಲ್ಲಿ ಹುಡುಗನೊಬ್ಬ ಆನೆಯನ್ನು ಕೋಲಿನಿಂದ ಹೊಡೆಯುವುದನ್ನು ಇದರಲ್ಲಿ ನೋಡಬಹುದು.
ಆಗ ಕೋಪಗೊಂಡ ಆನೆಯು ಹುಡುಗನನ್ನು ಬೆನ್ನಟ್ಟುತ್ತದೆ ಆದರೆ ಅದೃಷ್ಟವಶಾತ್ ಅದು ಅವನ ಮೇಲೆ ದಾಳಿ ಮಾಡಲಿಲ್ಲ. ನಂತರ ಯುವಕ ಮತ್ತು ಅವನ ಸ್ನೇಹಿತ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಥಳದಿಂದ ಓಡಿ ಹೋದರು. ಹೀಗೆ ಪ್ರಾಣಿಗಳನ್ನು ಹಿಂಸಿಸುವುದು ಸರಿಯಲ್ಲ, ಅದೃಷ್ಟ ಕೆಟ್ಟರೆ ಪ್ರಾಣಕ್ಕೆ ಮುಳುವಾಗಬಹುದು ಎಂದು ಈ ವಿಡಿಯೋ ತೋರಿಸುತ್ತದೆ.
ಈ ಬಾಲಕನ ಕ್ರಮಕ್ಕೆ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸುಮ್ಮನೇ ಪ್ರಾಣಿಗಳನ್ನು ಹಿಂಸಿಸುವುದು, ಪ್ರತಿಯಾಗಿ ಅವು ದಾಳಿ ಮಾಡಿದರೆ ಅವುಗಳನ್ನು ಹೊಡೆದು ಸಾಯಿಸಲಾಗುತ್ತದೆ. ಮಕ್ಕಳಿಗೆ ಹಿರಿಯರು ಬುದ್ಧಿ ಹೇಳಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.