ಕೆಲವರಿಗೆ ಕೆಲವು ಆಹಾರ ತಿಂದರೆ ದೇಹಕ್ಕೆ ಆಗುವುದಿಲ್ಲ. ಫುಡ್ ಅಲರ್ಜಿಯಾದರೆ ಸಾಮಾನ್ಯವಾಗಿ ಹೊಟ್ಟೆನೋವು, ನಾಲಿಗೆ ಊದುವುದು, ವಾಂತಿ, ಕೆಮ್ಮು, ಚರ್ಮ ತುರಿಕೆ, ತಲೆ ಸುತ್ತು ಹಾಗೂ ಉಸಿರಾಟದ ತೊಂದರೆ ಕಾಡುತ್ತದೆ. ತಕ್ಷಣಕ್ಕೆ ಈ ಮನೆ ಮದ್ದು ಉಪಯೋಗಿಸಿದರೆ ಸ್ವಲ್ಪ ಮಟ್ಟಿಗೆ ಅಲರ್ಜಿ ಕಡಿಮೆ ಮಾಡಿಕೊಳ್ಳಬಹುದು.
* ದಿನಕ್ಕೆ 2 ರಿಂದ 3 ಪೀಸ್ ಶುಂಠಿ ಜಗಿಯಬೇಕು. ಇಲ್ಲವಾದರೆ ಶುಂಠಿ ಟೀ ಕುಡಿಯಬೇಕು. ಇದರಿಂದ ವಾಂತಿ, ಅಜೀರ್ಣ ಹಾಗೂ ಡಯೇರಿಯಾ ಕಡಿಮೆಯಾಗುತ್ತದೆ.
* 1 ಕಪ್ ಮೊಸರು ಸೇವಿಸಿದರೆ, ದೇಹದ ಬ್ಯಾಕ್ಟೀರಿಯಾ ಹೊರ ಹೋಗುತ್ತದೆ. ಇದು ಕಿಬ್ಬೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ.
* ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕಲು ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿ ಹಾಗೂ ಟೊಮ್ಯಾಟೋ ದೇಹವನ್ನು ಹೆಚ್ಚೆಚ್ಚು ಸೇರುವಂತೆ ನೋಡಿಕೊಳ್ಳಬೇಕು.
* ನಾಚಿಕೆ ಮುಳ್ಳು, ದೊಡ್ಡ ಪತ್ರೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ನೆಗಡಿ, ಚರ್ಮ ತುರಿಕೆ ಹಾಗೂ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಈ ಔಷಧಿಯನ್ನು ವಾರ ಪೂರ್ತಿ ಸೇವಿಸಬೇಕು.
* ಪ್ರತಿದಿನ ಬೆಳಗ್ಗೆ ಹೊತ್ತು ಒಂದು ಗ್ಲಾಸ್ ನೀರಿಗೆ ನಿಂಬೆ ಹಣ್ಣಿನ ರಸ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಯಾವುದೇ ಅಲರ್ಜಿ ಇದ್ದರೂ ದೂರವಾಗುತ್ತದೆ.