ತೂಕ ಇಳಿಸಿಕೊಳ್ಳೋದು ಈಗಿನ ದಿನದಲ್ಲಿ ಸವಾಲಿನ ಕೆಲಸ. ನಿಯಮಿತವಾಗಿ ವ್ಯಾಯಾಮ ಮಾಡಲು ಸಮಯವಿಲ್ಲ. ಆಹಾರದಲ್ಲಿ ಬದಲಾವಣೆ ತರುವ ಮನಸ್ಸಿಲ್ಲ. ತೂಕ ಮಾತ್ರ ಸುಲಭವಾಗಿ ಇಳಿಯಬೇಕು ಎಂದ್ರೆ ಹೇಗೆ ಸಾಧ್ಯ ಎನ್ನುತ್ತಾರೆ ತಜ್ಞರು. ಆದ್ರೆ ಇನ್ಮುಂದೆ ಈ ಚಿಂತೆ ಬೇಡ.
ನಿಯಮಿತವಾಗಿ ವ್ಯಾಯಾಮ ಮಾಡದೆಯೇ ನಿಮ್ಮ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ಬ್ರಿಟನ್ ನಲ್ಲಿ ನಡೆದ ಅಧ್ಯಯನವೊಂದು ತೂಕ ಇಳಿಸಿಕೊಳ್ಳುವವರಿಗೆ ಸುಲಭ ಮಾರ್ಗ ಹೇಳಿದೆ. ನೀವು ಏನೂ ಮಾಡಬೇಕಾಗಿಲ್ಲ. ದಿನದಲ್ಲಿ ಎರಡರಿಂದ ಮೂರು ಗಂಟೆ ನಿಂತಿದ್ದರೆ ಸಾಕು.
ಸಂಶೋಧಕರು ಒಂದು ವಾರಗಳ ಕಾಲ ಮೂರು ಗಂಟೆ ನಿಂತುಕೊಳ್ಳುವಂತೆ ಅಧ್ಯಯನದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ಹೇಳಿದ್ದರು. ಒಂದು ಗಂಟೆ ನಂತ್ರ ಪರಿಶೀಲನೆ ನಡೆಸಿದಾಗ 40 ಕ್ಯಾಲೋರಿ ಬರ್ನ್ ಆಗಿರುವುದು ಕಂಡು ಬಂದಿದೆ. ಮೂರು ಗಂಟೆ ನಿಂತವರ 630 ಕ್ಯಾಲೋರಿ ಬರ್ನ್ ಆಗಿದೆ. ಪ್ರತಿ ನಿಮಿಷಕ್ಕೆ 0.7 ಕ್ಯಾಲೋರಿ ಬರ್ನ್ ಆಗಿದೆ ಎಂದು ಅಧ್ಯಯನ ಹೇಳಿದೆ.
ನಿಂತುಕೊಳ್ಳಲು ಎಲ್ಲಿ ಸಮಯವಿದೆ ಎನ್ನುವವರಿಗೆ ಅಧ್ಯಯನ, ಉಪಾಯ ತಿಳಿಸಿದೆ. ಆದಷ್ಟು ನಿಮ್ಮ ಕೆಲಸವನ್ನು ನಿಂತೇ ಮಾಡಿ. ಕಂಪ್ಯೂಟರ್ ಕೆಲಸದಿಂದ ಹಿಡಿದು ಫೋನ್ ನಲ್ಲಿ ಮಾತನಾಡುವಾಗ ಹಾಗೂ ಟಿವಿ ನೋಡುವಾಗ ನಿಂತಿರಿ. ಆಮೇಲೆ ಪರಿಣಾಮ ನೋಡಿ ಎನ್ನುತ್ತದೆ ಅಧ್ಯಯನ ತಂಡ.