ಕಾಲೇಜು ಉಪನ್ಯಾಸಕರಿಗೆ ಡ್ರೆಸ್ ಕೋಡ್ ನಿಯಮವನ್ನು ಜಾರಿಗೊಳಿಸುವ ಕುರಿತಂತೆ, ತಮಿಳುನಾಡು ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಕಾಲೇಜು ಉಪನ್ಯಾಸಕರು ತಮ್ಮ ಅಂಗಗಳನ್ನು ಮುಚ್ಚುವಂತಹ ಓವರ್ ಕೋಟ್ ಧರಿಸಲು ಸೂಚಿಸಲಾಗಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಉಪನ್ಯಾಸಕರ ಉಡುಪಿನ ಕುರಿತಂತೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರದ ತೀರ್ಮಾನವನ್ನು ಬಹುತೇಕ ಉಪನ್ಯಾಸಕರು ಸ್ವಾಗತಿಸಿದ್ದರೆ ಕೆಲವರು ಅಪಸ್ವರ ಎತ್ತಿದ್ದಾರೆ.