ಯಾರು ಜಾಸ್ತಿ ನಿದ್ದೆ ಮಾಡ್ತಾರೆ ಅನ್ನೋ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳ ಆಗ್ತಾನೇ ಇರುತ್ತೆ. ಮಹಿಳೆಯರೇ ಜಾಸ್ತಿ ಹೊತ್ತು ಮಲಗ್ತಾರೆ ಅಂತಾ ಪುರುಷರು ಹೇಳಿದ್ರೆ, ಹೆಚ್ಚು ನಿದ್ದೆ ಮಾಡುವವರು ಪುರುಷರು ಅನ್ನೋದು ಸ್ತ್ರೀಯರ ವಾದ.
ಸಂಶೋಧನೆಯೊಂದರ ಪ್ರಕಾರ ಪುರುಷರ ವಾದವೇ ಸರಿ. ಮಹಿಳೆಯರೇ ಅಧಿಕ ಸಮಯ ನಿದ್ದೆ ಮಾಡ್ತಾರೆ. ಮಹಿಳೆಯರ ಮೆದುಳು ಹೆಚ್ಚು ಸಂಕೀರ್ಣವಾಗಿರುತ್ತದೆ. ಜೊತೆಗೆ ಪುರುಷರಿಗಿಂತ ಮಹಿಳೆಯರ ಮೆದುಳೇ ಹೆಚ್ಚು ಹಾರ್ಡ್ ವರ್ಕ್ ಕೂಡ ಮಾಡುತ್ತದೆ.
ಹಾಗಾಗಿಯೇ ಮಹಿಳೆಯರು ಒಂದೇ ಸಮಯದಲ್ಲಿ ಹತ್ತಾರು ಕೆಲಸಗಳನ್ನು ಮಾಡ್ತಾರೆ. ಅಷ್ಟೇ ಅಲ್ಲ ಮಹಿಳೆಯರು ಪುರುಷರಿಗಿಂತ ಐದು ಪಟ್ಟು ಜಾಸ್ತಿ ಮಾಹಿತಿಗಳನ್ನು ಕೂಡ ವಿನಿಮಯ ಮಾಡಿಕೊಳ್ತಾರೆ. ಇಷ್ಟೆಲ್ಲಾ ಚಟುವಟಿಕೆ ಮಾಡಬೇಕು ಅಂದ್ರೆ ಸಹಜವಾಗಿಯೇ ಮೆದುಳಿಗೆ ವಿಶ್ರಾಂತಿ ಬೇಕು. ಹಾಗಾಗಿ ಪುರುಷರಿಗಿಂತ ಮಹಿಳೆಯರಿಗೆ ನಿದ್ದೆ ಹೆಚ್ಚು ಎನ್ನುತ್ತಾರೆ ಸಂಶೋಧಕರು.