ಹಣಕ್ಕಾಗಿ ಮನುಷ್ಯ ಏನು ಬೇಕಾದ್ರೂ ಮಾಡ್ತಾನೆ ಅನ್ನೋದಕ್ಕೆ ಅನೇಕ ಉದಾಹರಣೆಗಳು ಇವೆ. ಇದೀಗ ಮತ್ತೊಂದು ಉದಾಹರಣೆ ಎನ್ನುವಂತೆ ಕಟ್ಟಿಕೊಂಡ ಹೆಂಡತಿ ಅನ್ನೋದನ್ನೂ ನೋಡದೆ ಅದರಲ್ಲೂ ಗರ್ಭಿಣಿ ಹೆಂಡತಿ ಅಂತನೂ ನೋಡದೆ ಕೊಲೆ ಮಾಡಿದ್ದಾನೆ ಪಾಪಿ ಗಂಡ. ವಿಮೆ ಹಣಕ್ಕಾಗಿ ಕಟ್ಟಿಕೊಂಡ ಹೆಂಡತಿಯನ್ನೇ ಸಾಯಿಸಿದ್ದಾನೆ ಈ ಕ್ರೂರ ಗಂಡ.
ಹೌದು, ಈ ಘಟನೆ ನಡೆದಿರೋದು ಟರ್ಕಿಯಲ್ಲಿ. ಇಲ್ಲಿನ ದಕ್ಷಿಣ ಟರ್ಕಿಯ ಮುಗ್ಲಾದ ಜನಪ್ರಿಯ ಪ್ರವಾಸಿ ತಾಣ ಬಟರ್ಫ್ಲೈ ವ್ಯಾಲಿಯಲ್ಲಿ ಇರುವ ಕಲ್ಲಿನ ಬಂಡೆಯ ಪ್ರಪಾತಕ್ಕೆ ತಳ್ಳಿ ಕೊಂದಿದ್ದಾನೆ. ವಿಮೆ ಪಾಲಿಸಿಯ ಹಣಕ್ಕಾಗಿ ತನ್ನ 7 ತಿಂಗಳ ಗರ್ಭಿಣಿ ಪತ್ನಿಯನ್ನು 304 ಮೀಟರ್ ಅಡಿ ಕಲ್ಲಿನ ಪ್ರಪಾತಕ್ಕೆ ನೂಕಿದ್ದಾನೆ. 32 ವರ್ಷದ ಸೆಮ್ರಾ ಐಸಲ್ ಸಾವನ್ನಪ್ಪಿದ ದುರ್ದೈವಿ. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪತ್ನಿಯನ್ನು 304 ಮೀಟರ್ ಬಂಡೆಯ ಅಂಚಿಗೆ ಕರೆದೊಯ್ದು ಕೊಂದಿದ್ದಾನೆ.
ಇನ್ನು ಈ ಘಟನೆ ನಡೆದಿರೋದು 2018 ರಲ್ಲಿ ಈ ಘಟನೆಯ ಸಂಪೂರ್ಣ ವಿಚಾರಣೆ ನಡೆಸಿದ ಕೋರ್ಟ್ ಹಕನ್ ಐಸಲ್ ತಪ್ಪಿತಸ್ಥ ಎಂದು ಹೇಳಿ ಆದೇಶ ನೀಡಿದೆ. ಇನ್ನು ನಾನು ಮಾನಸಿಕವಾಗಿ ಸರಿ ಇಲ್ಲ ಅಂತ ಕ್ಲೈಮ್ ಮಾಡಲು ಹೊರಟಿದ್ದನು ಈ ಕೊಲೆ ಆರೋಪಿ. ಆದರೆ ಕೋರ್ಟ್ ಇವರ ಅರ್ಜಿ ನಿರಾಕರಿಸಿದೆ. ಜೊತೆಗೆ ನ್ಯಾಯಾಲಯವು ಐಸಲ್ ಅವರನ್ನು ಬಿಡುಗಡೆಗೆ ಪರಿಗಣಿಸುವ ಮೊದಲು ಕನಿಷ್ಠ 30 ವರ್ಷಗಳ ಶಿಕ್ಷೆಯನ್ನು ಅನುಭವಿಸಲು ಆದೇಶ ನೀಡಿದೆ. ಇನ್ನು ಪ್ರತ್ಯಕ್ಷದರ್ಶಿಯೊಬ್ಬರು ಈ ಘಟನೆಯ ವಿಡಿಯೋ ಸಾಕ್ಷಿ ನೀಡಿದ್ದರು. ಇದನ್ನು ಕೂಡ ಕೋರ್ಟ್ ಪರಿಗಣಿಸಿ ಆದೇಶ ನೀಡಿದೆ.