alex Certify ‌ʼವಾಟ್ಸಾಪ್‌ʼ ಬಳಕೆದಾರರಿಗೆ ಗುಡ್‌ ನ್ಯೂಸ್: 1024 ಜನರೊಂದಿಗೆ ಮಾಡಬಹುದು ಗ್ರೂಪ್‌ ಚಾಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼವಾಟ್ಸಾಪ್‌ʼ ಬಳಕೆದಾರರಿಗೆ ಗುಡ್‌ ನ್ಯೂಸ್: 1024 ಜನರೊಂದಿಗೆ ಮಾಡಬಹುದು ಗ್ರೂಪ್‌ ಚಾಟ್‌

ವಾಟ್ಸಾಪ್‌ ಒಂದಿಲ್ಲೊಂದು ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸಾಪ್‌, ಕಮ್ಯೂನಿಟಿಗಳು ಎಂಬ ಹೊಸ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರ್ಷದ ಆರಂಭದಲ್ಲಿಯೇ Meta CEO ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ್ದರು.

ಇದು ವಾಟ್ಸಾಪ್‌ಗ್ರೂಪ್‌ಗಳೊಂದಿಗೆ ಸಂಪರ್ಕಿಸಲು ಬಳಕೆದಾರರಿಗೆ  ಸಹಾಯ ಮಾಡುತ್ತದೆ. ಒಂದೇ ರೀತಿಯ ಆಸಕ್ತಿ ಹೊಂದಿರುವ ಜನರನ್ನು ಒಂದೆಡೆ ತರುವುದು ಇದರ ಉದ್ದೇಶ.

ವಾಟ್ಸಾಪ್‌ ಕಮ್ಯೂನಿಟಿ ಈಗಾಗ್ಲೇ ಬಳಕೆದಾರರಿಗೆ ಲಭ್ಯವಿದೆ. ಇದರ ಜೊತೆಗೆ 1024 ಬಳಕೆದಾರರೊಂದಿಗೆ ಇನ್-ಚಾಟ್ ಪೋಲ್‌ಗಳು, 32-ವ್ಯಕ್ತಿಗಳ ಜೊತೆಗೆ ವೀಡಿಯೊ ಕರೆಗಳು ಮತ್ತು ಗ್ರೂಪ್‌ಗಳನ್ನು ರಚಿಸುವ ಹೊಸದೊಂದು ಫೀಚರ್‌ ಅನ್ನು ಕೂಡ ಅಭಿವೃದ್ಧಿಪಡಿಸಲಾಗ್ತಿದೆ. ಪ್ರತ್ಯೇಕ ಗುಂಪುಗಳನ್ನು ಈ ಫೀಚರ್‌ ಅಡಿಯಲ್ಲಿ ಒಂದೆಡೆ ತರಬಹುದು. ಇಡೀ ಕಮ್ಯೂನಿಟಿಗೆ ಅಪ್ಡೇಟ್‌ ಕಳುಹಿಸಲು, ಸ್ವೀಕರಿಸಲು ಇದು ಸಹಾಯ ಮಾಡುತ್ತದೆ.

ಮುಖ್ಯವಾದ ವಿಷಯಗಳ ಕುರಿತು ಚರ್ಚೆಗೂ ಗ್ರೂಪ್‌ಗಳನ್ನು ಆಯೋಜನೆ ಮಾಡಬಹುದು. ಎಲ್ಲರಿಗೂ ಕಳುಹಿಸಲಾಗುವ ಪ್ರಕಟಣೆ, ಸಂದೇಶಗಳನ್ನು ನಿಯಂತ್ರಿಸಲೂಬಹುದು.  ಈ ಕಮ್ಯೂನಿಟಿ ಫೀಚರ್‌ ಅನ್ನು ಬಳಸಿಕೊಳ್ಳಲು Android ಚಾಟ್‌ಗಳ ಮೇಲ್ಭಾಗದಲ್ಲಿ ಮತ್ತು iOS ನಲ್ಲಿ ಕೆಳಭಾಗದಲ್ಲಿರುವ ಹೊಸ ಕಮ್ಯೂನಿಟಿ ಟ್ಯಾಬ್ ಅನ್ನು ಟ್ಯಾಪ್ ಮಾಡಬೇಕು.

ಅಲ್ಲಿ ಸೂಚಿಸಿರುವ ಹಂತಗಳನ್ನು ಅನುಸರಿಸಿ ಹೊಸ ಕಮ್ಯೂನಿಟಿ ಪ್ರಾರಂಭಿಸಬಹುದು ಅಥವಾ ಅಸ್ತಿತ್ವದಲ್ಲಿರುವ ಗ್ರೂಪ್‌ಗಳನ್ನು ಸೇರಿಸಬಹುದು. ಒಮ್ಮೆ ನೀವು ವಾಟ್ಸಾಪ್‌ ಕಮ್ಯೂನಿಟಿ ಸೇರಿದ ನಂತರ, ನಿಮಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಲಭ್ಯವಿರುವ ಗ್ರೂಪ್‌ಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಅಡ್ಮಿನ್‌ಗಳು ಕಮ್ಯೂನಿಟಿಯಲ್ಲಿರುವ ಪ್ರತಿಯೊಬ್ಬರಿಗೂ ಅಪ್‌ಡೇಟ್‌ಗಳನ್ನು ಕಳುಹಿಸಬಹುದು.

ವಾಟ್ಸಾಪ್‌ನಲ್ಲಿ ಇನ್-ಚಾಟ್ ಪೋಲ್

ಅಂತಿಮವಾಗಿ ಈ ಫೀಚರ್‌ ಅನ್ನು ಹೊರತರುವ ಮೊದಲು ವಾಟ್ಸಾಪ್‌  ಬಹಳ ಹಿಂದೆಯೇ ಇನ್-ಚಾಟ್ ಪೋಲ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿತ್ತು. ಬೀಟಾ ಆವೃತ್ತಿಗಳಲ್ಲಿ ಗುರುತಿಸಿದಂತೆ ವಾಟ್ಸಾಪ್‌ ನಿಮಗೆ ಇನ್-ಚಾಟ್ ಪೋಲ್‌ಗಳಲ್ಲಿ ಪ್ರಶ್ನೆಯನ್ನು ರಚಿಸಲು ಅನುಮತಿಸುತ್ತದೆ. ಅಪ್ಲಿಕೇಶನ್‌ನಲ್ಲಿ ಪ್ರತ್ಯೇಕ ಪರದೆಯಲ್ಲಿ 12 ಸಂಭವನೀಯ ಉತ್ತರಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ. ಈ ಫೀಚರ್‌ ಹೇಗೆ ಕಾಣಿಸಿಕೊಳ್ಳುತ್ತದೆ ಮತ್ತು ಅದರ ಕಾರ್ಯ ಹೇಗೆ ಅನ್ನೋದನ್ನು ಇನ್ನೂ ಬಹಿರಂಗಪಡಿಸಿಲ್ಲ. ಇತ್ತೀಚಿನ ಫೀಚರ್‌ಗಳನ್ನು ಪಡೆಯಲು ನೀವು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ನಿಮ್ಮ ವಾಟ್ಸಾಪ್‌ ಅನ್ನು ಅಪ್ಡೇಟ್‌ ಮಾಡಬೇಕು.

1024 ಜನರೊಂದಿಗೆ ಗ್ರೂಪ್ ಚಾಟ್, 32 ಮಂದಿಗೆ ಏಕಕಾಲದಲ್ಲಿ ವೀಡಿಯೊ ಕರೆ

ವಾಟ್ಸಾಪ್‌ 1024 ಜನರನ್ನು ಗ್ರೂಪ್‌ಗೆ ಸೇರಿಸಲು ಅನುಮತಿಸುತ್ತದೆ. ಪ್ರಸ್ತುತ ನೀವು ಗುಂಪಿಗೆ 200 ಕ್ಕಿಂತ ಹೆಚ್ಚು ಜನರನ್ನು ಸೇರಿಸಲಾಗುತ್ತಿರಲಿಲ್ಲ. ಇನ್ಮೇಲೆ ಗ್ರೂಪ್‌ ವಿಡಿಯೋ ಕಾಲ್‌ನಲ್ಲಿ 32 ಮಂದಿ ಪಾಲ್ಗೊಳ್ಳಬಹುದು. ಇದರ ಹೊರತಾಗಿ ದೊಡ್ಡ ಫೈಲ್‌ಗಳನ್ನು ಶೇರ್‌ ಮಾಡಲು, ಅಡ್ಮಿನ್‌ಗಳಿಗೆ ಡಿಲೀಟ್‌ ಆಪ್ಷನ್‌ ಅನ್ನು ಸಹ ವಾಟ್ಸಾಪ್‌ ಹೊರತಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...