ಟಿ ಟ್ವೆಂಟಿ ವರ್ಲ್ಡ್ ಕಪ್ ನ ಗ್ರೂಪ್ 2ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಗೆ ಬರುವ ನಿರೀಕ್ಷೆಯಲ್ಲಿವೆ. ಇನ್ನೂ ಗ್ರೂಪ್ 1ನಲ್ಲಿರುವ ಬಲಿಷ್ಠ ತಂಡಗಳಾದ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡ 5 ಪಾಯಿಂಟ್ ಗಳನ್ನು ಪಡೆದುಕೊಂಡಿದ್ದು. ಸೆಮಿಫೈನಲ್ ಗೆ ಯಾವ ತಂಡ ಪ್ರವೇಶಿಸಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ. ನ್ಯೂಜಿಲ್ಯಾಂಡ್ ನ ರನ್ ರೇಟ್ ಸಾಕಷ್ಟಿದ್ದು, ಗ್ರೂಪ್ 1ರ ಪಾಯಿಂಟ್ ಟೇಬಲ್ ನಲ್ಲಿ ಮೊದಲನೇ ಸ್ಥಾನದಲ್ಲಿದೆ.
3ತಂಡಗಳಿಗೂ ತಲಾ ಒಂದೊಂದು ಪಂದ್ಯಗಳು ಉಳಿದಿದ್ದು, ಸಾಕಷ್ಟು ರೋಚಕತೆಯಿಂದ ಸಾಗುತ್ತಿದೆ. ಈ 3ತಂಡಗಳ ಪಂದ್ಯಗಳು ಇಂತಿವೆ. ನ್ಯೂಜಿಲ್ಯಾಂಡ್ vs ಐರ್ಲೆಂಡ್ ಹಾಗೂ ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ್ ನಡುವಣ ನಾಳೆ ಅಡಿಲೇಡ್ ನಲ್ಲಿ 2ಪಂದ್ಯಗಳು ನಡೆಯಲಿದ್ದು. ನವೆಂಬರ್ ಐದರಂದು ಇಂಗ್ಲೆಂಡ್ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿವೆ.
ಯಾವ ತಂಡವನ್ನೂ ಸಾಮಾನ್ಯ ಎಂದು ಪರಿಗಣಿಸುವಂತಿಲ್ಲ ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಐರ್ಲೆಂಡ್ ತಂಡ ಗೆಲುವು ಸಾಧಿಸಿದ್ದನ್ನು ನಾವು ನೋಡಿದ್ದೇವೆ. ಸೆಮಿಫೈನಲ್ ಗೆ ಯಾವ ತಂಡ ಲಗ್ಗೆ ಇಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ