alex Certify ನೇರಳೆ ಬಣ್ಣದ ಹಣ್ಣುಗಳ‌ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ʼಆರೋಗ್ಯʼ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇರಳೆ ಬಣ್ಣದ ಹಣ್ಣುಗಳ‌ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ʼಆರೋಗ್ಯʼ ಪ್ರಯೋಜನ

ನೇರಳೆ ಬಣ್ಣ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಅನೇಕ ತರಕಾರಿಗಳು ಮತ್ತು ಹಣ್ಣುಗಳ ಬಣ್ಣವೂ ನೇರಳೆ ಇರೋದನ್ನು ನೀವು ಗಮನಿಸಿರಬಹುದು. ಪರ್ಪಲ್‌ ಕಲರ್‌ನಲ್ಲಿರೋ ಆಹಾರಗಳು ತಿನ್ನಲು ಕೂಡ ಬಹಳ ರುಚಿಕರವಾಗಿರುತ್ತವೆ. ಬಹುತೇಕ ಹಣ್ಣು ತರಕಾರಿಗಳ ಬಣ್ಣ ಕೆಂಪು ಅಥವಾ ಹಸಿರು. ಹಾಗಿದ್ಮೇಲೆ ಇವುಗಳ ಬಣ್ಣವೇಕೆ ನೇರಳೆ ಅನ್ನೋದನ್ನು ಯೋಚಿಸಿದ್ದೀರಾ?

ಇವುಗಳಲ್ಲಿರುವ ಆಂಥೋಸಯಾನಿನ್‌ಗಳಿಂದಾಗಿ ಬಣ್ಣ ನೇರಳೆಯಾಗಿರುತ್ತದೆ. ಇದು ನೇರಳೆ ತರಕಾರಿಗಳಲ್ಲಿ ಕಂಡುಬರುವ ವರ್ಣದ್ರವ್ಯ. ಆಂಥೋಸಯಾನಿನ್‌ಗಳಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಹಾಗಾಗಿ ನೇರಳೆ ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು.

 ನೇರಳೆ ಆಹಾರದ ಗುಣಲಕ್ಷಣಗಳು

ನೇರಳೆ ಆಹಾರ ಪದಾರ್ಥಗಳಲ್ಲಿ ಆಂಥೋಸಯಾನಿನ್‌ಗಳ ಜೊತೆಗೆ  ಉತ್ಕರ್ಷಣ ನಿರೋಧಕಗಳು, ಕ್ಯಾನ್ಸರ್ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ. ಈ ಆಹಾರ ಹೃದಯದಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ನೇರಳೆ ಹಣ್ಣು

ಎಂಟಿಒಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಜಾಮೂನ್ ಅಥವಾ ನೇರಳೆ ಹಣ್ಣು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದರಲ್ಲಿರುವ ಆಂಥೋಸಯಾನಿನ್‌ಗಳು ಜೀವಕೋಶದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತವೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹ ಇದು ಪ್ರಯೋಜನಕಾರಿಯಾಗಿದೆ. ಫೈಬರ್, ವಿಟಮಿನ್ ಸಿ, ಫೋಲಿಕ್ ಆಸಿಡ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ನೇರಳೆ ಹಣ್ಣಿನಲ್ಲಿವೆ. ಮೊಸರಿನೊಂದಿಗೆ ಬೆರ್ರಿ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ.

ನೇರಳೆ ಆಲೂಗಡ್ಡೆ

ನೇರಳೆ ಆಲೂಗಡ್ಡೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಸಾಮಾನ್ಯ ಆಲೂಗಡ್ಡೆಗಿಂತ ಎರಡು ಪಟ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ನೇರಳೆ ಆಲೂಗಡ್ಡೆಯಲ್ಲಿ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ನೇರಳೆ ಆಲೂಗಡ್ಡೆಯಲ್ಲಿರುವ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ದೇಹದ ಉರಿಯೂತವನ್ನು ಕಡಿಮೆ ಮಾಡಬಲ್ಲವು.

ನೇರಳೆ ದ್ರಾಕ್ಷಿ

ನೇರಳೆ ದ್ರಾಕ್ಷಿಗಳು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಅವು ರೆಸ್ವೆರಾಟ್ರೊಲ್ ಮತ್ತು ಆಂಥೋಸಯಾನಿನ್ ಎಂಬ ಎರಡು ಸಂಯುಕ್ತಗಳನ್ನು ಹೊಂದಿರುತ್ತವೆ. ರೆಸ್ವೆರಾಟ್ರೊಲ್ ಜೀವಕೋಶಗಳನ್ನು ರಕ್ಷಿಸುವ ಕೆಲಸ ಮಾಡಿದ್ರೆ,  ಆಂಥೋಸಯಾನಿನ್‌ಗಳು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.

ನೇರಳೆ ಎಲೆಕೋಸು

ನೇರಳೆ ಎಲೆಕೋಸನ್ನು ಕೆಂಪು ಎಲೆಕೋಸು ಎಂದೂ ಕರೆಯುತ್ತಾರೆ. ಈ ಎಲೆಕೋಸಿನ ಬಣ್ಣವು ಅದರಲ್ಲಿರುವ ಥೋಸಯಾನಿನ್‌ಗಳಿಂದಾಗಿ ನೇರಳೆಯಾಗಿರುತ್ತದೆ. ನೇರಳೆ ಎಲೆಕೋಸು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಫೈಬರ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ.

ಎಲ್ಡರ್‌ಬೆರ್ರಿ

ಎಲ್ಡರ್‌ಬೆರ್ರಿಯ ವೈಜ್ಞಾನಿಕ ಹೆಸರು ಸಾಂಬುಕಸ್. ಇದು ಹಣ್ಣುಗಳಂತೆ ಕಾಣುತ್ತದೆ. ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕ್ಯಾರೋಟಿನ್, ಟ್ಯಾನಿಕ್, ಪ್ಯಾರಾಫಿನ್ ಮತ್ತು ಕೋಲೀನ್ ನಂತಹ ಪೋಷಕಾಂಶಗಳು ಎಲ್ಡರ್‌ಬೆರ್ರಿಗಳಲ್ಲಿ ಇರುತ್ತವೆ. ಸೋಂಕು, ಉರಿಯೂತ ಮತ್ತು ನೋವಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ಎಲ್ಡರ್‌ಬೆರ್ರಿ ಚರ್ಮಕ್ಕೆ ಸಹ ಪ್ರಯೋಜನಕಾರಿಯಾಗಿದೆ.

ನೇರಳೆ ಹೂಕೋಸು

ಆಂಥೋಸಯಾನಿನ್‌ಗಳು ಮತ್ತು ಎಂಟಿಒಕ್ಸಿಡೆಂಟ್‌ಗಳ ಜೊತೆಗೆ, ಆರೋಗ್ಯಕ್ಕೆ ಪ್ರಯೋಜನಕಾರಿಯಾದ ನೇರಳೆ ಹೂಕೋಸುಗಳಲ್ಲಿ ಅನೇಕ ಗುಣಲಕ್ಷಣಗಳು ಕಂಡುಬರುತ್ತವೆ. ನೇರಳೆ ಎಲೆಕೋಸು ಹೃದಯದ ಸಮಸ್ಯೆ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...